

ಟೋಕಿಯೊ: ಸ್ಟ್ರೈಕರ್ ಲೂಯಿಸ್ ಪೆರೇಜ್ ಗಳಿಸಿದ ಎರಡು ಗೋಲುಗಳ ಸಹಾಯದಿಂದ ಬಾರ್ಸಿಲೋನಾ ಎಫ್ ಸಿ ತಂಡವು ಭಾನುವಾರ ಮುಕ್ತಾಯಗೊಂಡ ಫಿಫಾ ಕ್ಲಬ್ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಿವರ್ ಪ್ಲೇಟ್ ತಂಡದ ವಿರುದ್ಧ ಸೆಣಸಿದ ಬಾರ್ಸಿಲೋನಾ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ, ಪ್ರಶಸ್ತಿಯೊಂದಿಗೆ 3 ಕೋಟಿ, 60 ಲಕ್ಷ ರು. ಮೊತ್ತವನ್ನು ಬಹುಮಾನವಾಗಿ ಪಡೆಯಿತು.
ಪಂದ್ಯದ 36ನೇ ನಿಮಿಷದಲ್ಲಿ ಲಿಯೊನಲ್ ಮೆಸ್ಸಿ ಗೋಲುಗಳಿಸು ವ ಮೂಲಕ ಬಾರ್ಸಿಲೋನಾ ತಂಡಕ್ಕೆ ಮೊದಲ ಗೋಲು ತಂದಿತ್ತರು. ಆನಂತರ ಮಿಂಚಿದ ಲೂಯಿಸ್ ಸುರೇಜ್ 49ನೇ ನಿಮಿಷದಲ್ಲಿ ಹಾಗೂ 68ನೇ ನಿಮಿಷದಲ್ಲಿ ಸತತ ಎರಡು ಗೋಲು ಗಳಿಸಿದರು.