ಫಿಲಿಪ್ಪೀನ್ಸ್ ಗಾಲ್ಫ್: ಹಿಮ್ಮತ್ ರೈ ತೃತೀಯ

ಭಾರತದ ಉದಯೋನ್ಮುಖ ಗಾಲ್ಫರ್ ಹಿಮ್ಮತ್ ರೈ, ಭಾನುವಾರ ಮುಕ್ತಾಯಗೊಂಡ ಪಿsಲಿಪ್ಪೀನ್ಸ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ...
ಹಿಮ್ಮತ್ ರೈ
ಹಿಮ್ಮತ್ ರೈ
Updated on

ಟಾರ್ಲಾಕ್: ಭಾರತದ ಉದಯೋನ್ಮುಖ ಗಾಲ್ಫರ್ ಹಿಮ್ಮತ್ ರೈ, ಭಾನುವಾರ ಮುಕ್ತಾಯಗೊಂಡ ಪಿsಲಿಪ್ಪೀನ್ಸ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಪಂದ್ಯಾವಳಿಯ ಕೊನೆಯ ದಿನ ನಡೆದ ಸ್ಪರ್ಧೆಯಲ್ಲಿ ಯಾವುದೇ ತಪ್ಪುಗಳನ್ನೆಸಗದೇ 63 ಅಂಕಗಳನ್ನು ಗಳಿಸಿದ ಅವರು, ಮೂರನೇ ಸ್ಥಾನಕ್ಕೆ ಏರಿದರು. ಇದೇ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಇತರ ಭಾರತೀಯ ಗಾಲ್ಫರ್‍ಗಳಾದ ಗಗನ್‍ಜೀತ್ ಭುಲ್ಲಾರ್ (71 ಅಂಕ), ಖಲೀನ್ ಜೋಷಿ (70 ಅಂಕ) ಜಂಟಿ 10ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಟೂರ್ನಿಯಲ್ಲಿ ಸ್ಥಳೀಯ ಕ್ರೀಡಾಳು  ಮಿಗ್ಯುಯೆಲ್ ಟಬೀನಾ ಮೊದಲಿಗರಾದರೆ, ಆಸ್ಟ್ರೇಲಿಯಾದ ಸ್ಕಾಟ್ ಬರ್ರ್ ದ್ವಿತೀಯ ಸ್ಥಾನ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com