

ನವದೆಹಲಿ: ಮುಂದಿನ ವರ್ಷ ಫಬ್ರವರಿಯಲ್ಲಿ ನಡೆಯಲಿರುವ ಫೆಡರೇಷನ್ ಕಪ್ ಟೆನಿಸ್ ಚಾಂಪಿಯನ್‍ಶಿಪ್‍ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅಗ್ರ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ತಂಡದ ಸಾರಥ್ಯ ವಹಿಸಲಾಗಿದೆ.
ಇದರ ಜತೆಯಲ್ಲೇ, ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಪುರುಷರು ಹಾಗೂ ಮಹಿಳೆಯರ ತಂಡಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ. ತಂಡದ ಸಿಂಗಲ್ಸ್ ವಿಭಾಗದ ಆಟಗಾರ್ತಿಯರಲ್ಲಿ ಅಂಕಿತಾ ರೈನಾ, ರಾಷ್ಟ್ರೀಯ ಚಾಂಪಿಯನ್ ಪ್ರೇರಣಾ ಭಾಂಬ್ರಿ ಹಾಗೂ ಪ್ರಾರ್ಥನಾ ಥೋಂಬ್ರೆ ಸ್ಥಾನ ಪಡೆದಿದ್ದಾರೆ. ಕರ್ಮನ್ ಕೌರ್ ಥಾಂಡಿಗೆ ಮೀಸಲು ಆಟಗಾರ್ತಿಯಾಗಿ ಸೇರ್ಪಡೆಗೊಂಡಿದ್ದಾರೆ.