ಮೈಕೆಲ್ ಶುಮಾಕರ್ ಚೇತರಿಕೆ?

ಎರಡು ವರ್ಷಗಳಿಂದ ಕೋಮಾದಲ್ಲಿರುವ ಎಫ್ 1 ಕ್ರೀಡೆಯ ಮಾಜಿ ವಿಶ್ವ ಚಾಂಪಿಯನ್ ಮೈಕಲ್ ಶುಮಾಕರ್ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣಿಸಿಕೊಂಡಿರುವ ಬಗ್ಗೆ ವರದಿ ಜರ್ಮನಿಯ ನಿಯತಕಾಲಿಕೆ...
ಫಾರ್ಮುಲಾ 1 ಚಾಲಕ ಮೈಕಲ್ ಶೂಮಾಕರ್
ಫಾರ್ಮುಲಾ 1 ಚಾಲಕ ಮೈಕಲ್ ಶೂಮಾಕರ್

ಬರ್ಲಿನ್: ಕಳೆದ ಎರಡು ವರ್ಷಗಳಿಂದ ಕೋಮಾದಲ್ಲಿರುವ ಎಫ್ 1 ಕ್ರೀಡೆಯ ಮಾಜಿ ವಿಶ್ವ ಚಾಂಪಿಯನ್ ಮೈಕಲ್ ಶುಮಾಕರ್ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣಿಸಿಕೊಂಡಿರುವ  ಬಗ್ಗೆ ವರದಿ ಜರ್ಮನಿಯ ನಿಯತಕಾಲಿಕೆ `ಬಂಟೆ' ವರದಿ ಮಾಡಿದೆ.

ಶುಮಾಕರ್ ಚೇತರಿಸಿಕೆಯ ಹಾದಿ ಹಿಡಿದಿದ್ದು ಅಲ್ಪ ಪ್ರಮಾಣದಲ್ಲಿ ಅವರು ಕೈ ಕಾಲುಗಳನ್ನು ಆಡಿಸುತ್ತಿದ್ದು, ಶೀಘ್ರದಲ್ಲೇ ನಡೆದಾಡಬಲ್ಲರು ಎಂದು ಹೇಳಿದೆ. ಆದರೆ ಈ ವರದಿಯನ್ನು ಶುಮಾಕರ್ ಅವರ ವಕ್ತಾರ ಸಬೀನ್ ಖೆಮ್ ಅಲ್ಲಗಳೆದಿದ್ದಾರೆ. 2013ರಲ್ಲಿ ತಮ್ಮ ಕುಟುಂಬದೊಡನೆ ಪ್ರವಾಸಕ್ಕೆ ತೆರಳಿದ್ದ ವೇಳೆ ಸ್ಕೀಯಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಶುಮಾಕರ್  ಮಾರಣಾಂತಿಕವಾಗಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com