ಕೋಲ್ಕತಾ: ಒಲಿಂಪಿಕ್ಸ್‍ಗಳಲ್ಲಿ ಭಾಗವಹಿಸಿದ್ದ ಸೈಕ್ಲಿಸ್ಟ್ ಸುಪ್ರಭಾತ್ ಚಕ್ರಬೊರ್ತಿ (86) ಹೃದಯಾಘಾತದಿಂದ ಗುರುವಾರ ನಿಧನ ಹೊಂದಿದರು. ಐದು ಬಾರಿ ನ್ಯಾಷನಲ್ ಚಾಂಪಿಯನ್ ಆಗಿದ್ದ ಚಕ್ರಬೊರ್ತಿ ದೇಶೀಯ ಸೈಕ್ಲಿಂಗ್ ಕ್ಷೇತ್ರದಲ್ಲಿ ಖಾಜಾ ಎಂದೇ ಪರಿಚಿತರು.
1951ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟ, 1952ರ ಹೆಲ್ಸಿಂಕಿ ಒಲಿಂಪಿಕ್ಸ್‍ನಲ್ಲಿ ಹಾಗೂ ಅದೇ ವರ್ಷ ನಡೆದಿದ್ದ ವಿಶ್ವ ಶಾಂತಿ ರೇಸ್‍ನಲ್ಲೂ ಪಾಲ್ಗೊಂಡಿದ್ದರು. ಇದಲ್ಲದೆ,
ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಚಕ್ರಬೊರ್ತಿ ಅಗಲಿಕೆ ಹಿನ್ನೆಲೆಯಲ್ಲಿ, ಕೋಲ್ಕತಾ ಕ್ರೀಡಾ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಸಂಜೆ