

ಪಣಜಿ: ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್) ಟೂರ್ನಿಯ ಫೆೈನಲ್ ಪಂದ್ಯದ ನಂತರ, ಟೂರ್ನಿಯ ಮೂವರು ರೆಫರಿಗಳ ಹಲ್ಲೆ ಮಾಡಿರುವ ಆರೋಪಕ್ಕೆ ಗುರಿಯಾ ಗಿರುವ ಗೋವಾ ತಂಡದ ಸಿಬ್ಬಂದಿ ಬಗ್ಗೆ ಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್ಎಫ್) ಮುಂದಿನ ವಾರ ನಿರ್ಧಾರ ಕೈಗೊಳ್ಳಲಿದೆ. ಕಳೆದ ಭಾನುವಾರ ನಡೆದಿದ್ದ ಐಎಸ್‍ಎಲ್ ಫೆೈನಲ್‍ನಲ್ಲಿ ಗೋವಾ ತಂಡವನ್ನು ಮಣಿಸಿದ್ದ ಚೆನ್ನೈಯಿನ್ ತಂಡ ಪ್ರಶಸ್ತಿ ಗೆದ್ದಿತ್ತು. ಸೋಲಿನ ಹತಾಶೆಯಲ್ಲಿ ಗೋವಾ ತಂಡದ ಸಿಬ್ಬಂದಿ ಜಪಾನ್ ಮೂಲದ 3 ರೆಫರಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ಪಂದ್ಯದ ಆಯುಕ್ತ ಎ.ಕೆ. ಮಮುಕೋಯಾ ಎಐಎಫ್ಎಫ್ ಗೆ ವರದಿ ಮಾಡಿದ್ದಾರೆ.