

ಜಮೈಕಾ: ವೆಸ್ಟ್ ಇಂಡೀಸ್‍ನ ಆಲ್ರೌಂಡರ್ ಡ್ವೈನ್ ಬ್ರಾವೊ ಟೆಸ್ಟ್ ಕ್ರಿಕೆಟ್‍ನಿಂದ ದೂರ ಸರಿದಿದ್ದಾರೆ.
ವೆಸ್ಟ್ ಇಂಡೀಸ್ ಏಕದಿನ ತಂಡದಿಂದ ಅವರನ್ನು ಇತ್ತೀಚೆಗೆ ಕೈಬಿಡಲಾಗಿತ್ತು. ಅದರ ಬೆನ್ನಲ್ಲಿಯೇ ಅವರು ಟೆಸ್ಟ್ ಕ್ರಿಕೆಟ್ ಗೆ ನಿವತ್ತಿ ಘೋಷಿಸಿದ್ದಾರೆ. 31ರ ಪ್ರಾಯದ ಅವರು 40 ಟೆಸ್ಟ್ ಗಳನ್ನು ಆಡಿದ್ದು, 2200 ರನ್ ಗಳಿಸಿದ್ದಾರೆ. 86 ವಿಕೆಟ್ ಕಬಳಿಸಿದ್ದಾರೆ.