ಶಿಸ್ತು ಉಲ್ಲಂಘಿಸಿದರೆ ಉಗ್ರ ಕ್ರಮ: ಐಸಿಸಿ

ಇನ್ನೊಂದು ವಾರದಲ್ಲಿ ಆರಂಭಗೊಳ್ಳಲಿರುವ ಕ್ರಿಕೆಟ್ ಲೋಕದ ಬಹುದೊಡ್ಡ ಹಬ್ಬವಾದ...
ಶಿಸ್ತು ಉಲ್ಲಂಘಿಸಿದರೆ ಉಗ್ರ ಕ್ರಮ: ಐಸಿಸಿ

ಮೆಲ್ಬರ್ನ್: ಇನ್ನೊಂದು ವಾರದಲ್ಲಿ ಆರಂಭಗೊಳ್ಳಲಿರುವ ಕ್ರಿಕೆಟ್ ಲೋಕದ ಬಹುದೊಡ್ಡ ಹಬ್ಬವಾದ ವಿಶ್ವಕಪ್ ಪಂದ್ಯಾವಳಿಯನ್ನು ವಿವಾದಗಳಿಂದ ಮುಕ್ತಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪಣತೊಟ್ಟಿದೆ.

ನೀತಿ ಸಂಹಿತೆಯನ್ನು ಉಲ್ಲಂಘಿಸುವ ಆಟಗಾರರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಐಸಿಸಿ ಮಹಾ ವ್ಯವಸ್ಥಾಪಕ ಜೆಪ್ ಅಲಾರ್ಡೈಸ್, ಆಟದ ವೇಳೆ ಪ್ರೇರಕ್ಷಕರತ್ತ ಅಸಹ್ಯ ಭಂಗಿ ಅಥವಾ ಚಿಹ್ನೆಗಳನ್ನು ಪ್ರದರ್ಶಿಸುವುದು, ಅಂಪೈರ್‌ಗಳ ನಿರ್ಧಾರದ ವಿರುದ್ಧ ಮಾತನಾಡುವುದು, ಎದುರಾಳಿ ತಂಡದ ಆಟಗಾರರೊಂದಿಗೆ ಜಗಳ ತೆಗೆಯುವುದು ಈ ಮುಂತಾದ ನಡೆ ಅನುಸರಿಸಿದರೆ ಅಂಥ ಆಟಗಾರರು ಉಗ್ರ ಶಿಕ್ಷೆಗೊಳಗಾಗುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com