

ಅಡಿಲೇಡ್: ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಬದ್ಧ ಸಾಂಪ್ರದಾಯಿಕ ಎದುರಾಳಿಗಳ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು, ಪಾಕ್ 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದೆ.
301 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 42 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.
ಪಾಕ್ ನಾಯಕ ಮಿಸ್ಬಾ ಉಲ್ ಹಕ್ ಆಕರ್ಷಕ ಅರ್ಧ ಶತಕ ಬಾರಿಸಿ ಆಟವಾಡುತ್ತಿದ್ದು. ಯಾಸಿರ್ ಸಾಥ್ ನೀಡುತ್ತಿದ್ದಾರೆ.
ಆರಂಭಿಕ ಆಟಗಾರ ಯೂನಿಸ್ ಖಾನ್ ಬೇಗನೆ ವಿಕೆಟ್ ಒಪ್ಪಿಸಿದರು. ಬಳಿಕ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಶಹಜಾದ್ 47 ಮತ್ತು ಸೊಹೈಲ್ 36 ರನ್‌ಗಳಿಸಿ ಔಟಾದರು. ಮಕ್ಸೂದ್ ಮತ್ತು ಉಮರ್ ಅಕ್ಮಲ್ ಶೂನ್ಯಕ್ಕೆ ಔಟಾದರು. ಆಕ್ರಮಣಕಾರಿ ಆಟಗಾರ ಆಫ್ರಿದಿ 22 ರನ್ಗ್ ಔಟಾದರು.
ಭಾರತದ ಪರ ಉಮೇಶ್ ಯಾದವ್ 2 , ಶಮಿ 3, ಅಶ್ವಿನ್ 1 ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.