ಬೃಹತ್ ಮೊತ್ತದತ್ತ ತಮಿಳುನಾಡು

ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‍ರವರ ಅಮೋಘ ಶತಕದ ನೆರವಿನಿಂದ ತಮಿಳುನಾಡು ತಂಡ, ಮಹಾರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್..
ತಮಿಳುನಾಡು-ಮಹಾರಾಷ್ಟ್ರ ರಣಜಿ ಪಂದ್ಯ (ಸಂಗ್ರಹ ಚಿತ್ರ)
ತಮಿಳುನಾಡು-ಮಹಾರಾಷ್ಟ್ರ ರಣಜಿ ಪಂದ್ಯ (ಸಂಗ್ರಹ ಚಿತ್ರ)
Updated on: 

ಕೋಲ್ಕತಾ: ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‍ರವರ ಅಮೋಘ ಶತಕದ ನೆರವಿನಿಂದ ತಮಿಳುನಾಡು ತಂಡ, ಮಹಾರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದ ತನ್ನ ಮೊದಲ ಇನಿಂಗ್ಸ್‍ನಲ್ಲಿ ಗುರುವಾರ ಎರಡನೇ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 426 ರನ್‍ಗಳ ದೊಡ್ಡ ಮೊತ್ತ ಪೇರಿಸಿದೆ.

ಈಡನ್ ಗಾರ್ಡನ್ಸ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಹಾಗೂ ವಿಜಯ್ ಶಂಕರ್ ಜೋಡಿ 4ನೇ ವಿಕೆಟ್‍ಗೆ ನೀಡಿದ 190 ರನ್‍ಗಳ ಜೊತೆಯಾಟ ತಂಡದ ಇನಿಂಗ್ಸ್ ಗೆ ಆಸರೆಯಾಯಿತು. ನಂತರ, ರಾಮಸ್ವಾಮಿ ಪ್ರಸನ್ನ (ಬ್ಯಾಟಿಂಗ್ 64) ಹಾಗೂ ಬಾಬಾ ಇಂದ್ರಜಿತ್ (ಬ್ಯಾಟಿಂಗ್ 68) ಅವರ ಅರ್ಧಶತಕಗಳೂ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದವು. 6ನೇ ವಿಕೆಟ್‍ಗೆ ಮುರಿಯದ ಶತಕದ ಜೊತೆಯಾಟವಾಡಿರುವ ಇವರು, ಶುಕ್ರವಾರ ಮೂರನೇ ದಿನ ಇನಿಂಗ್ಸ್ ಮುಂದುವರಿಸಲಿದ್ದಾರೆ.

ಸಂಕ್ಷಿಪ್ತ ಸ್ಕೋರ್: ತಮಿಳುನಾಡು ಮೊದಲ ಇನಿಂಗ್ಸ್ 5 ವಿಕೆಟ್‍ಗೆ 426 (ಬುಧವಾರ ದಿನಾಂತ್ಯಕ್ಕೆ 3 ವಿಕೆಟ್‍ಗೆ 192); ದಿನೇಶ್ ಕಾರ್ತಿಕ್ 113, ವಿಜಯ್ ಶಂಕರ್ 91, ಶ್ರೀಕಾಂತ್ ಮುಂಡೆ 81ಕ್ಕೆ 1, ಖುರಾನಾ 64ಕ್ಕೆ 1.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com