

ಕೋಲ್ಕತಾ: ಮಹಾರಾಷ್ಟ್ರದ ಬೌಲಿಂಗ್ ದಾಳಿಯ ವಿರುದ್ಧ ಜಿಗುಟು ಆಟ ಪ್ರದರ್ಶಿಸಿದ ತಮಿಳುನಾಡು ತಂಡ, ಮಹಾರಾಷ್ಟ್ರ ವಿರುದ್ಧದ ರಣಜಿ ಸಮಿಫೈನಲ್ ಪಂದ್ಯದ ತನ್ನ ಮೊದಲ ಇನಿಂಗ್ಸ್‍ನಲ್ಲಿ 549 ರನ್‍ಗಳ ಬೃಹತ್ ಮೊತ್ತ ಪೇರಿಸಿದೆ.
ಗುರುವಾರ ದಿನಾಂತ್ಯಕ್ಕೆ ಅಜೇಯರಾಗುಳಿದಿದ್ದ ಪ್ರಸನ್ನ (72 ರನ್) ಹಾಗೂ ಇಂದ್ರಜಿತ್ (69 ರನ್) ಶುಕ್ರವಾರದ ದಿನದಾಟದಲ್ಲಿ ಹೆಚ್ಚು ಆಡಲಿಲ್ಲವಾದರೂ, ಆನಂತರ ಬಂದ ಮಲೋಲನ್ ರಂಗರಾಜನ್ ಅವರ ಅಜೇಯ 67 ರನ್‍ಗಳ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿತು. ಇನ್ನು, ಪಂದ್ಯದ ಮೂರನೇ ದಿನವಾದ ಶುಕ್ರವಾರ ತನ್ನ ಮೊದಲ ಇನಿಂಗ್ಸ್ ಆರಂಭಿಸಲು ಅವಕಾಶ ಪಡೆದ ಮಹಾರಾಷ್ಟ್ರ ದಿನಾಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ.
ಸಂಕ್ಷಿಪ್ತ ಸ್ಕೋರ್
ತಮಿಳುನಾಡು ಮೊದಲ ಇನಿಂಗ್ಸ್ 549 (ಇಂದ್ರಜಿತ್ 69, ರಂಗ ರಾಜನ್ ಅಜೇಯ 67, ಸಂಕ್ಲೇಚಾ 115ಕ್ಕೆ 3, ಖುರಾನಾ 80ಕ್ಕೆ 2.
ಮಹಾರಾಷ್ಟ್ರ ಮೊದಲ ಇನಿಂಗ್ಸ್ 110 ( ಸ್ವಪ್ನಿಲ್ ಗುಗಲೆ ಅಜೇಯ 56, ಖುರಾನಾ 36, ಲಕ್ಷ್ಮೀಪತಿ ಬಾಲಾಜಿ 35ಕ್ಕೆ 1.