ಕೊಹ್ಲಿ ಟೆಸ್ಟ್ ಸರಣಿಯಲ್ಲಿ 500 ರನ್ ಪೇರಿಸಿದ 2ನೇ ಭಾರತೀಯ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ತಮ್ಮ ವಿರಾಟ ರೂಪ ತೋರಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೊಂದರಲ್ಲಿ 500 ರನ್ ಗಳಿಸುವ ಮೂಲಕ ಎರಡನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸರಣಿಯ ಈ ಹಿಂದಿನ ಮೂರು ಟೆಸ್ಟ್‌ಗಳಿಂದ 499 ಗಳಿಸಿದ್ದ ಕೊಹ್ಲಿ, ಮೊದಲ ಇನಿಂಗ್ಸ್‌ನ ಸ್ಪೀನ್ನರ್ ನಾಥನ್ ಲಿಯಾನ್‌ರ 44ನೇ ಓವರ್‌ನಲ್ಲಿ ಬೌಂಡರಿ ಸಿಡಿಸುವ ಮೂಲಕ 500ರ ಗಡಿ ದಾಟಿದರು.

26ರ ಹರೆಯ ವಿರಾಟ್ ಕೊಹ್ಲಿ, 33ನೇ ಟೆಸ್ಟ್ ಪಂದ್ಯವಾಡುತ್ತಿದ್ದು, ಏಳನೇ ಇನಿಂಗ್ಸ್‌ನಲ್ಲಿ 500 ರನ್ ಗಡಿ ದಾಟಿದ್ದಾರೆ. ಭಾರತದ ಗೋಡೆ ಎಂದೇ ಖ್ಯಾತರಾಗಿದ್ದ ಕರ್ನಾಟಕದ ಆಟಗಾರ ರಾಹುಲ್ ದ್ರಾವಿಡ್ 2003-2004ರ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಎಂಟು ಇನಿಂಗ್ಸ್‌ಗಳ ಪೈಕಿ 619 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾದ ವಿರುದ್ಧದ ಸರಣಿಯಲ್ಲಿ ಸದ್ಯ ಮೂರು ಶತಕವನ್ನು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com