ಬೆಂಗಳೂರು ಎಫ್‌ಸಿಗೆ ಗೋವಾ ಸವಾಲು

ಸತತ ಎರಡು ಗೆಲುವಿನಿಂದ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಐ ಲೀಗ್ ಚಾಂಪಿಯನ್ ಬೆಂಗಳೂರು...
ಬೆಂಗಳೂರು ಎಫ್‌ಸಿಗೆ ಗೋವಾ ಸವಾಲು

ಗೋವಾ: ಸತತ ಎರಡು ಗೆಲುವಿನಿಂದ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಐ ಲೀಗ್ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ ಶುಕ್ರವಾರ ನಡೆಯಲಿರುವ ಫೆಡರೇಷನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಉಪಾಂತ್ಯದ ಪಂದ್ಯದಲ್ಲಿ ಆತಿಥೇಯ ಸ್ಪೋರ್ಟಿಗ್ ಕ್ಲಬ್ ಡಿ ಗೋವಾ ವಿರುದ್ಧ ಸೆಣೆಸಲು ಸಜ್ಜಾಗಿದೆ.

ಶುಕ್ರವಾರ ಇಲ್ಲಿನ ಫಟೊರ್ಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಹಣಾಹಣಿಯಲ್ಲಿ ಸುನೀಲ್ ಛೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ಎದುರಾಳಿ ತಂಡದ ವಿರುದ್ಧ ಗೆಲವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವ ವಿಶ್ವಾಸದಲ್ಲಿದೆ.

ಬಿ ಗುಂಪಿನ ಲೀಗ್ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ 3ರಲ್ಲಿ ಗೆಲವು ಹಾಗೂ 1ರಲ್ಲಿ ಡ್ರಾ ಸಾಧಿಸಿ ಸೋಲರಿಯದ ತಂಡವಾಗಿ ಮುನ್ನಡೆದಿದೆ. ಇನ್ನು ಗೋವಾ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡದ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಸೋಲನುಭವಿಸಿದರೂ, ನಂತರ ಚೇತರಿಕೊಂಡು ಈ ಹಂತದವರೆಗೂ ಆಗಮಿಸಿದೆ. ಹಾಗಾಗಿ ಇಂದು ನಡೆಯಲಿರುವ ಪಂದ್ಯ ಹೆಚ್ಚು ರೋಚಕವಾಗಿರುವ ನಿರೀಕ್ಷೆ ಇದೆ.

ಈ ಅಂಗಣದಲ್ಲಿ ಬೆಂಗಳೂರು ಎಫ್‌ಸಿ ಈವರೆಗೂ ಅತ್ಯುತ್ತಮ ಫಲಿತಾಂಶ ಪಡೆದು ಆಡಿರುವ 11 ಪಂದ್ಯಗಳ ಪೈಕಿ 8ರಲ್ಲಿ ಗೆಲುವು 2ರಲ್ಲಿ ಡ್ರಾ ಹಾಗೂ ಕೇವಲ 1 ರಲ್ಲಿ ಸೋಲನುಭವಿಸಿದೆ. ಹಾಗಾಗಿ ತಂಡ ಈ ಪಂದ್ಯದಲ್ಲೂ ಗೆಲುವಿನ ಹಾದಿಯಲ್ಲಿ ಸಾಗುವ ವಿಶ್ವಾಸ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com