ಖುಶ್ಬಿರ್ ಕೌರ್ ರಾಷ್ಟ್ರೀಯ ದಾಖಲೆ

ಮೂಡುಬಿದಿರೆಯಲ್ಲಿ ನಡೆಯುತ್ತಿರುವ 74ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್...
ಅಥ್ಲೆಟಿಕ್ ಚಾಂಪಿಯನ್‌ ಖುಶ್ಬಿರ್ ಕೌರ್
ಅಥ್ಲೆಟಿಕ್ ಚಾಂಪಿಯನ್‌ ಖುಶ್ಬಿರ್ ಕೌರ್
Updated on

ಮಂಗಳೂರು: ಮೂಡುಬಿದಿರೆಯಲ್ಲಿ ನಡೆಯುತ್ತಿರುವ 74ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ ಕ್ರೀಡಾಳು ಖುಶ್ಬಿರ್ ಕೌರ್ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ಮಹಿಳೆಯರು ವಿಭಾಗದ 5000 ಮೀ. ಕಾಲ್ನಡಿಗೆ ವಿಭಾಗದಲ್ಲಿ ಖುಶ್ಬಿರ್ ಕೌರ್ ನಿಗದಿತ ದೂರವನ್ನು 22:05 ನಿಮಿಷಗಳಲ್ಲಿ ಕ್ರಮಿಸಿ, ಇದೇ ವಿಭಾಗದಲ್ಲಿ ತಮ್ಮ ಹೆಸರಲ್ಲಿದ್ದ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು. 2011ರ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಖುಶ್ಬಿರ್ ಅವರು ಈ ದೂರವನ್ನು 23:33 ನಿಮಿಷಗಳಲ್ಲಿ ಕ್ರಮಿಸಿದ್ದರು.

ತಮ್ಮ ನೂತನ ದಾಖಲೆ ಬಗ್ಗೆ ಅನಿಸಿಕೆ ಹಂಚಿಕೊಂಡ ಕೌರ್, 'ನನ್ನ ದಾಖಲೆಯನ್ನು ನಾನೇ ಮುರಿದಿರುವುದು ಸಂತಸ ತಂದಿದೆ. 2016ರ ವಿಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧೆಯಲ್ಲಿ ಹೊಸ ದಾಖಲೆ ಸೃಷ್ಟಿಸಬೇಕೆಂಬುದು ನನ್ನ ಮುಂದಿರುವ ಗುರಿ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com