

ಮೆಲ್ಬರ್ನ್ : ಇಟೆಲಿಯ ಆಟಗಾರ ಆನ್ದ್ರೆಸ್ಸ್ ಸೆಪ್ಪಿಗೆ ಇದೊಂದು ಮರೆಯಾಲಾಗದ ಪಂದ್ಯ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಅವರು ಜಯಗಳಿಸಿ 4ನೇ ಸುತ್ತಿಗೆ ಪದಾರ್ಪಣೆ ಮಾಡಿದರು.
ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಅವರನ್ನು 4-6, 6-7 (5-7), 6-4, 6-7 (5-7) ಸೆಟ್ ಗಳಲ್ಲಿ ಮಣಿಸುವ ಮೂಲಕ ಸ್ವಿರ್ಡರ್ಲೆಂಡ್ ಆಟಗಾರನಿಗೆ ಶಾಕ್ ನೀಡಿದರು. ಕಳೆದ ಬಾರಿಯ ಆಸ್ಟ್ರೇಲಿಯನ್ ಓಪನ್‍ನಲ್ಲಿ ಸೆಮಿ ಫೈನಲ್‍ವರೆಗೆ ಪ್ರಯಾಣ ಬೆಳೆಸಿದ್ದ ಫೆಡರರ್, ಈಗ 3ನೇ ಸುತ್ತಿನಲ್ಲೇ ಗಂಟುಮೂಟೆ ಕಟ್ಟುವಂತಾಯಿತು.
ಡಿಮಿಟ್ರೊವ್ ವೀರಾವೇಶ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಸಿಪ್ರಸ್‍ನ ಮಾರ್ಕೋಸ್ ಬಾಗ್ದಾದೀಸ್, ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ನಡುವಿನ ಪಂದ್ಯ ತೀವ್ರ ಕುತೂಹಲಭರಿತವಾಗಿತ್ತು. ಇಬ್ಬರೂ ಮದಗಜಗಳಂತೆ ಕಾದಾಡಿದರೂ, ಅಂತಿಮವಾಗಿ ಡಿಮಿಟ್ರೋವ್ ಈ ಸಮರದಲ್ಲಿ 4-6, 6-3, 3-6, 6-3, 6-3 ಸೆಟ್‍ಗಳಲ್ಲಿ ಗೆಲವು ಸಾ„ಸಿದರು. ಅತ್ತ, ಬಾಗ್ದಾದೀಸ್ ಅವರ ಆಟವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಮರ್ರೆ, ನಡಾಲ್, ಬೆರ್ಡಿಚ್ ಮುನ್ನಡೆ: ಬ್ರಿಟನ್‍ನ ಆಂಡಿ ಮರ್ರೆ ಅವರು, ಪೊರ್ಚುಗಲ್‍ನ ಜೊವಾವೊ ಸೌಸಾ ವಿರುದಟಛಿ 6-1, 6-1, 7-5 ಅಂತರದಲ್ಲಿ ಜಯ ಗಳಿಸಿದರು. ಸ್ಪೇನ್‍ನ ರಾಫಲ್ ನಡಾಲ್, ಇಸ್ರೇಲ್‍ನ ಡ್ಯುಡಿ ಸೆಲಾ ವಿರುದ್ಧ 6-1, 6-0, 7-5 ಸೆಟ್‍ಗಳಲ್ಲಿ ಗೆಲವು ಪಡೆದರು. ಇನ್ನು, ಚೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್, ಸರ್ಬಿಯಾದ ವಿಕ್ಟರ್ ಟ್ರಾಯ್ಕಿ ವಿರುದಟಛಿ 6-4, 6-3, 6-4 ಸೆಟ್‍ಗಳಲ್ಲಿ ಮಣಿಸಿ, 4ನೇ ಸುತ್ತಿಗೆ ಕಾಲಿಟ್ಟರು.