ಕ್ರೀಡೆ

ಬೋಲ್ಡ್ ಮೆಜೆಸ್ಟಿಗೆ ಡರ್ಬಿ ಪ್ರಶಸ್ತಿ

ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ರೇಸ್ ಎಂದೇ ಬಿಂಬಿತವಾಗಿದ್ದ ಲೆಗಸಿ ಪ್ರಾಯೋಜಕತ್ವದ...

ಬೋಲ್ಡ್ ಮೆಜೆಸ್ಟಿಗೆ ಡರ್ಬಿ ಪ್ರಶಸ್ತಿ
ಬೆಂಗಳೂರು ಡರ್ಬಿ ರೇಸ್‍ನಲ್ಲಿ ಚಾಂಪಿಯನ್ ಆದ ಬೋಲ್ಡ್ ಮೆಜೆಸ್ಟಿ ಮಾಲೀಕರಾದ ಎಂ.ಎ.ಎಂ ರಾಮಸ್ವಾಮಿಅವರಿಗೆ ಲೆಗಸಿ ಗ್ರೂಪ್‍ನ ನಿರ್ದೇಶಕರಾದ ಬಿ.ಎಚ್ ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ
Published On :

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ರೇಸ್ ಎಂದೇ ಬಿಂಬಿತವಾಗಿದ್ದ ಲೆಗಸಿ ಪ್ರಾಯೋಜಕತ್ವದ ಬೆಂಗಳೂರು ಡರ್ಬಿ ರೇಸ್‍ನಲ್ಲಿ ಬೋಲ್ಡ್ ಮೆಜೆಸ್ಟಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಸೋಮವಾರ ಬೆಂಗಳೂರು ಟರ್ಫ್ ಕ್ಲಬ್‍ನಲ್ಲಿ ನಡೆದ 40ನೇ ಡರ್ಬಿ ರೇಸ್‍ನಲ್ಲಿ ದೇಶದ ವಿವಿಧ ಭಾಗಗಳಿಂದ 9 ರೇಸ್‍ಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವರ್ಣರಂಜಿತ ರೇಸ್‍ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಬೋಲ್ಡ್ ಮೆಜೆಸ್ಟಿ ಚಾಂಪಿಯನ್ ಆಯಿತು.

ಇನ್ನು ಬೋಲ್ಡ್ ಮೆಜೆಸ್ಟಿ ಕುದುರೆಯ ಮಾಲೀಕರಾದ ಎಂ.ಎ.ಎಂ ರಾಮಸ್ವಾಮಿ ಅವರು ರು1.57 ಕೋಟಿ ಬಹುಮಾನ ಪಡೆದರು. ನಂತರ ಮಾತನಾಡಿದ ಬೆಂಗಳೂರರು ಟರ್ಫ್ ಅಧ್ಯಕ್ಷ ವಿ ಹರಿಮೋಹನ್ ನಾಯ್ಡು, ಈ ಬಾರಿಯ ಚಳಿಗಾಲದ ಡರ್ಬಿ ರೇಸ್ ಯಶಸ್ವಿಯಾಗಿದ್ದಕ್ಕೆ ಲೆಗಸಿ ಹಾಗೂ ಬಿಟಿಸಿಯ ಎಲ್ಲಾ ಪದಾಧಿಕಾರಿಗಳಿಗೂ ಧನ್ಯವಾದ ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲೂ ಈ ರೀತಿಯಾದ ರೇಸ್‍ಗಳನ್ನು ಆಯೋಜಿಸಲಿ ಎಂದು ಆಶಿಸುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.