

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ರಷ್ಯಾದ ಮರಿಯಾ ಶರಪೋವಾ ಅವರನ್ನು ಸೋಲಿಸುವ ಮೂಲಕ ಅಮೆರಿಕದ ಅಗ್ರ ಶ್ರೇಯಾಂಕ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಸೆರೆನಾ, ಶರಫೋವಾ ವಿರುದ್ಧ 6-3, 7-6(7/5) ಸೆಟ್‌ಗಳ ಅಂತರದಲ್ಲಿ ಗೆಲವು ಸಾಧಿಸುವ ಮೂಲಕ ಸೆರೆನಾ 6ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದಾರೆ. ಇದರೊಂದಿಗೆ ಜೀವಮಾನದ 19ನೇ ಗ್ರ್ಯಾಂಡ್ ಸ್ಮಾಮ್ ಟೈಟಲ್ ಅನ್ನು ಸೆರೆನಾ ಗೆದ್ದುಕೊಂಡರು.