ಸೆರೆನಾ ವಿಲಿಯಂ ಸೋದರಿಯರ ಮುಖಾಮುಖಿ

ಟೆನಿಸ್ ಲೋಕದ ಸಹೋದರಿಯರಾದ ಸೆರೆನಾ ವಿಲಿಯಮ್ಸ್ ಹಾಗೂ ವೀನಸ್ ವಿಲಿಯಮ್ ಇಬ್ಬರು ಇಂದು ನಡೆಯಲಿರುವ ವಿಂಬಲ್ಡನ್ ಮಹಿಳೆಯರ...
ಸೆರನಾ ವಿಲಿಯಮ್ಸ್ ಸಹೋದರಿಯರು
ಸೆರನಾ ವಿಲಿಯಮ್ಸ್ ಸಹೋದರಿಯರು

ಟೆನಿಸ್ ಲೋಕದ ಸಹೋದರಿಯರಾದ ಸೆರೆನಾ ವಿಲಿಯಮ್ಸ್ ಹಾಗೂ ವೀನಸ್ ವಿಲಿಯಮ್ ಇಬ್ಬರು ಇಂದು ನಡೆಯಲಿರುವ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ವಿಭಾಗದ 4ನೇ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ.

ಟೆನಿಸ್ ಅಂಕಣಗಳಲ್ಲಿ ಈ ಇಬ್ಬರೂ ಸಹೋದರಿಯರದ್ದೂ ಒಟ್ಟು 26ನೇ ಮುಖಾಮುಖಿ. ವಿಂಬಲ್ಡನ್ ನಲ್ಲಿ  ಇಬ್ಬರು ಹೀಗೆ ಎದುರುಬದುರಾಗುತ್ತಿರುವುದು ಇದು 6ನೇ ಬಾರಿ. 1998ರಲ್ಲಿ ನಡೆದಿದ್ದ ಆಸ್ಟ್ರೇಲಿಯನ್  ಓಪನ್ ಪಂದ್ಯಾವಳಿಯ 2ನೇ ಸುತ್ತಿನ ಪಂದ್ಯದಲ್ಲಿ ಈ ಇಬ್ಬರೂ ಮೊದಲ ಬಾರಿಗೆ  ಮುಖಾಮುಖಿಯಾಗಿದ್ದರು.

ಈ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿರುವ ವೀನಸ್  ವಿಲಿಯಮ್ ನಾನು ಹಾಗೂ ಸೆರೆನಾ  ಇಬ್ಬರೂ ಪಂದ್ಯವನ್ನಾಡುವಾಗ ಅಕ್ಕ ತಂಗಿ ಎಂಬುದನ್ನು ಮರೆತು ಹಾಡುತ್ತೇವೆ. ಕೇವಲ ಕ್ರೀಡೆಯ ದೃಷ್ಟಿಕೋನದಲ್ಲೇ ನಾನು ಪ್ರದರ್ಶನ ನೀಡುತ್ತೇನೆ. ಯಾರು ಗೆದ್ದರೂ, ಯಾರು ಸೋತರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿರುವುದಾಗಿ ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com