ನ್ಯೂಜಿಲೆಂಡ್ ಮಣಿಸಿದ ಭಾರತೀಯ ವನಿತೆಯರು, ಸರಣಿ ಕೈವಶ

ಉಭಯ ತಂಡಗಳು 2-2 ಪಂದ್ಯಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿದ್ದು, ಕೊನೆಯ ಹಾಗೂ ನಿರ್ಣಾಯ ಪಂದ್ಯದಲ್ಲಿ ಭಾರತದ ವನಿತೆಯರು ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡ(ಸಂಗ್ರಹ ಚಿತ್ರ)
ಭಾರತೀಯ ಮಹಿಳಾ ಕ್ರಿಕೆಟ್ ತಂಡ(ಸಂಗ್ರಹ ಚಿತ್ರ)

ಬೆಂಗಳೂರು: ನ್ಯೂಜಿಲೆಂಡ್ ವನಿತೆಯರ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತೀಯ ವನಿತೆಯರು ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದ್ದಾರೆ.

ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಮಹಿಳೆಯರ ವಿರುದ್ಧದ ಏಕದಿನ ಸರಣಿಯಲ್ಲಿ ಉಭಯ ತಂಡಗಳು 2-2 ಪಂದ್ಯಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿದ್ದವು. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಹಾಗೂ ನಿರ್ಣಾಯ ಪಂದ್ಯದಲ್ಲಿ ಭಾರತದ ವನಿತೆಯರು ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡದ ಕಿವಿ ಹಿಂಡಿದ ಭಾರತೀಯ ವನಿತೆಯರು 41 ಓವರ್ ಗೆ ಆಲೌಟ್ ಮಾಡಿದರು. ಇದರೊಂದಿಗೆ 118 ರನ್ ಗಳಿಗೆ ಕಿವೀಸ್ ಸರ್ವ ಪತನಗೊಂಡಿತು. 119 ರನ್ ಗಳ ಸುಲಭ ಮೊತ್ತದ ಗುರಿಯನ್ನು ಬೆನ್ನತ್ತಿದ್ದ ಭಾರತೀಯ ವನಿತೆಯರು ಆರಂಭದಿಂದ್ದಲೆ ಅಬ್ಬರಿಸಿದರು. ಪರಿಣಾಮ 27 ಓವರ್ ನ 2ನೇ ಚೆಂಡನ್ನು ಬೌಂಡರಿಗಟ್ಟುವ ಮೂಲಕ 1 ವಿಕೆಟ್ ನಷ್ಟಕ್ಕೆ ಭಾರತೀಯ ವನಿತೆಯರು 121 ರನ್ ಗಳಿಸುವ ಮೂಲಕ ಭರ್ಜರಿ ಜಯ ಗಳಿಸಿದರು.

ಭಾರತ ಪರ ಸ್ಮೃತಿ ಮಂದಾನ 13 ರನ್ ಗಳಿಸಿದರೆ, ತ್ರೀಷು ಕಾಮಿನಿ 62 ಮತ್ತು ದೀಪ್ತಿ ಶರ್ಮಾ 44 ರನ್ ಗಳ ಜತೆಯಾದ ಭಾರತ ಗೆಲುವಿನ ದಡ ಸೇರಿತು.

ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟು ಹಾಕುವಲ್ಲಿ ಭಾರತೀಯ ವನಿತೆಯರು ಯಶಸ್ವಿಯಾಗಿದ್ದು, ಭಾರತ ಪರ ಗೋಸ್ವಾಮಿ, ಗಾಯಕ್ವಾಡ್, ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ ಬಿಸ್ತ ಹಾಗೂ ಕೌರ್ ತಲಾ ಒಂದು ವಿಕೆಟ್ ಪಡೆದ ತಂಡದ ಗೆಲುವಿಗೆ ರೂವಾರಿಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com