ನಡಾಲ್ ಮಣಿಸಿದ ಫೇಸ್

ವಿಶ್ವ ಟೆನಿಸ್ ಲೋಕದ ದಿಗ್ಗಜರಾದ ಲಿಯಾಂಡರ್ ಫೇಸ್ ಮತ್ತು ರಾಫೆಲ್ ನಡಾಲ್ ಇಬ್ಬರೂ ಗುರುವಾರ ರಾತ್ರಿ ನಡೆದ ಎಟಿಪಿ ಏಗನ್ ಟೆನಿಸ್ ಚಾಂಪಿಯನ್ ಶಿಪ್
ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್

ಲಂಡನ್: ವಿಶ್ವ ಟೆನಿಸ್ ಲೋಕದ  ದಿಗ್ಗಜರಾದ ಲಿಯಾಂಡರ್ ಫೇಸ್ ಮತ್ತು ರಾಫೆಲ್ ನಡಾಲ್ ಇಬ್ಬರೂ ಗುರುವಾರ ರಾತ್ರಿ ನಡೆದ ಎಟಿಪಿ ಏಗನ್ ಟೆನಿಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗಿದ್ದಾರೆ.

ಪುರುಷರ ಡಬಲ್ಸ್ ವಿಭಾಗದ 16 ರ ಘಟ್ಟದ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ಕೆನಡಾದ ಡೇನಿಯಲ್ ನೆಸ್ಟರ್  ಜೋಡಿ, ಸ್ಪೇನ್ ನ ರಾಫೆಲ್ ನಡಾಲ್ ಹಾಗೂ ಮಾರ್ಕ್ ಲೋಪೇಜ್ ವಿರುದ್ಧ 7-6, 6-4 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿ ಉಪಾಂತ್ಯ ಘಟ್ಟಕ್ಕೆ ಪ್ರವೇಶಿಸಿತು. ಟೂರ್ನಿಯ ಮೂರನೇ ಶ್ರೇಯಾಂಕಿತ ಭಾರತ-ಕೆನಡಾ ಜೋಡಿಗೆ ಮೊದಲ ಸೆಟ್  ತೀವ್ರ ಕಷ್ಟಕರವಾಗಿ ಪರಿಣಮಿಸಿತು. ಎದುರಾಳಿಗಳ ಪ್ರಬಲ ಆಟಕ್ಕೆ ಈ ಜೋಡಿಯೂ ಪ್ರಬುದ್ಧ ಆಟ ಪ್ರದರ್ಶಿಸಿದ ಹಿನ್ನೆಲೆಯಲ್ಲಿ , ಆ ಸೆಟ್ ಟೈ ಬ್ರೇಕರ್ ಗೆ ಬಂದು ನಿಂತಿತು. ನಂತರ ಮುಂದುವರಿದ ಆಟದಲ್ಲಿ ಪೇಸ್ ಜೋಡಿಯೇ ಜಯ ಸಾಧಿಸಿತು. ನಂತರ ಎರಡನೇ ಸೆಟ್ ನಲ್ಲಿ ಉತ್ತಮ ಆಟ ತೋರಿದ ಭಾರತ ಕೆನಡಾ ಜೋಡಿ, ಪಂದ್ಯದಲ್ಲೂ ಜಯ ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com