ರೋಜರ್ ಫೆಡರರ್ ಗೆ 7ನೇ ದುಬೈ ಓಪನ್ ಪ್ರಶಸ್ತಿ ಗರಿ

ಸ್ವಿಜರ್‍ಲೆಂಡ್‍ನ ರೋಜರ್ ಫೆಡರರ್ ಏಳನೇ ಬಾರಿಗೆ ದುಬೈ ಓಪನ್ ಟೆನಿಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ರೋಜರ್ ಫೆಡರರ್
ರೋಜರ್ ಫೆಡರರ್
Updated on: 

ದುಬೈ: ಸ್ವಿಜರ್‍ಲೆಂಡ್‍ನ ರೋಜರ್ ಫೆಡರರ್ ಏಳನೇ ಬಾರಿಗೆ ದುಬೈ ಓಪನ್ ಟೆನಿಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಫೆಡರರ್, 6-3, 7-5 ನೇರ ಸೆಟ್‍ಗಳಿಂದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಪರಾಭವಗೊಳಿಸಿ ಈ ಸಾಧನೆ ಮಾಡಿದರು.

ಜೀವನದ 126ನೇ ಎಟಿಪಿ ಫೈನಲ್‍ನಲ್ಲಿ ಆಡಿದ್ದ ಸ್ವಿಸ್ ಆಟಗಾರ, ವಿಶ್ವದ ನಂಬರ್ ಒನ್ ಆಟಗಾರ ಜೊಕೊವಿಚ್‍ಗೆ ಕಠಿಣ ಸವಾಲು ಒಡ್ಡುವ ಮೂಲಕ ಮೈಕೊಡವಿ ಮೇಲೇಳಲು ಅವಕಾಶವನ್ನೇ ನೀಡಲಿಲ್ಲ.

ಇದರೊಂದಿಗೆ ಫೆಡರರ್ ಅವರು ಜೊಕೊವಿಚ್ ಜೊತೆಗಿನ ಮುಖಾಮುಖಿಯಲ್ಲಿ 20-17ರ ಅಂತರದಲ್ಲಿ ತಮ್ಮ ಮೇಲುಗೈ ಮುಂದುವರಿಸಿಕೊಂಡು ಹೋದರು. ಅಲ್ಲದೆ, ದುಬೈನಲ್ಲಿ ಈ ಇಬ್ಬರೂ ಪರಸ್ಪರ ನಾಲ್ಕನೇ ಬಾರಿಗೆ ಎದುರಾಗಿದ್ದರು. ಫೆಡರರ್ 3-1ರ ಮುನ್ನಡೆಯೊಂದಿಗೆ ತಮ್ಮ ಪ್ರಭುತ್ವ ಸ್ಥಾಪಿಸಿದ್ದಾರೆ.

ಈ ಮುನ್ನ ಫೆಡರರ್, 2003ರಲ್ಲಿ ಜಿರಿ ನೊವಾಕ್, 2004ರಲ್ಲಿ ಫೆಲಿಸಿಯಾನೊ ಲೊಪೆಜ್, 2005ರಲ್ಲಿ ಇವಾನ್ ಲ್ಯೂಬಿಸಿಸ್, 2007ರಲ್ಲಿ ಮೈಕೆಲ್ ಯೋಜಿನಿ, 2012ರಲ್ಲಿ ಆ್ಯಂಡಿ ಮರ್ರೆ ಹಾಗೂ 2014ರಲ್ಲಿ ತಾಮಸ್ ಬೆರ್ಡಿಚ್ ರನ್ನು ಸೋಲಿಸಿ ದುಬೈ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.

ಬೋಪಣ್ಣ-ನೆಸ್ಟರ್‍ಗೆ ಡಬಲ್ಸ್ ಪ್ರಶಸ್ತಿ
ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಡ್ಯಾನಿಯಲ್ ನೆಸ್ಟರ್ ಜೋಡಿ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಬೋಪಣ್ಣ ಮತ್ತು ನೆಸ್ಟರ್, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಐಸಾಮುಲ್ ಹಕ್ ಖುರೇಷಿ ಮತ್ತು ಸರ್ಬಿಯಾದ ನೆನಾದ್ ಜಿಮೊಂಜಿಚ್ ವಿರುದ್ಧ 6-4, 6-1 ಸೆಟ್‍ಗಳಿಂದ ಸೋಲಿಸಿ ಈ ಸಾಧನೆ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com