ವೀಕ್ಷಕರು ಅಂಪೈರ್ ಮಾತನ್ನೂ ಕೇಳಬಹುದು!

ಕ್ರಿಕೆಟ್ ಪಂದ್ಯಾವಳಿ ವೇಳೆ ಟಿವಿ ಅಂಪೈರ್ ಗಳ ಮಾತುಕತೆಗಳನ್ನು ವೀಕ್ಷಕರಿಗೆ ಕೇಳಿಸುವ ವಿನೂತನ ಪ್ರಯೋಗಕ್ಕೆ ಐಸಿಸಿ ಮುಂದಾಗಿದ್ದು..
ಮೂರನೇ ಅಂಪೈರ್ (ಸಂಗ್ರಹ ಚಿತ್ರ)
ಮೂರನೇ ಅಂಪೈರ್ (ಸಂಗ್ರಹ ಚಿತ್ರ)
Updated on: 

ಸಿಡ್ನಿ: ಕ್ರಿಕೆಟ್ ಪಂದ್ಯಾವಳಿ ವೇಳೆ ಟಿವಿ ಅಂಪೈರ್ ಗಳ ಮಾತುಕತೆಗಳನ್ನು ವೀಕ್ಷಕರಿಗೆ ಕೇಳಿಸುವ ವಿನೂತನ ಪ್ರಯೋಗಕ್ಕೆ ಐಸಿಸಿ ಮುಂದಾಗಿದ್ದು, ಪ್ರಸ್ತುತ ವಿಶ್ವಕಪ್ ಪಂದ್ಯಾವಳಿಯ ನಾಕೌಟ್ ಹಂತದ ವೇಳೆ ಇದನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಇಷ್ಟು ವರ್ಷಗಳ ಕಾಲ ತೃತೀಯ ಅಂಪೈರ್ ಹಾಗೂ ಮೈದಾನದ ಅಂಪೈರ್ ನಡುವಿನ ಮಾತುಕತೆ ಹೇಗೆ ನಡೆಯುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಈ ಕುತೂಹಲವನ್ನು ತಣಿಸಲು ಐಸಿಸಿ ಮುಂದಾಗಿದೆ. ಅಂದರೆ, ವಿಶ್ವಕಪ್‍ನ ನಾಕೌಟ್ ಪಂದ್ಯಗಳ ವೇಳೆ ಟಿವಿ ಅಂಪೈರ್ ಹಾಗೂ ಮೈದಾನದ ಅಂಪೈರ್ ನಡುವಿನ ಸಂವಹನವನ್ನು ಪ್ರಸಾರ ಮಾಡಲು ಐಸಿಸಿ ನಿರ್ಧರಿಸಿದೆ. ಬುಧವಾರ ಸಿಡ್ನಿ ಮೈದಾನದಲ್ಲಿ ನಡೆಯಲಿರುವ ಶ್ರೀಲಂಕಾ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಿಂದಲೇ ಇದು ಜಾರಿಗೆ ಬರಲಿದೆ.

ತೃತೀಯ ಅಂಪೈರ್ ಜತೆ ಆನ್‍ಫೀಲ್ಡ್ ಅಂಪೈರ್‍ಗಳು ನಡೆಸುವ ಮಾತುಕತೆಯ ಆಡಿಯೋ ಫೀಡ್ ಅನ್ನು ನೇರಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ನವೆಂಬರ್‍ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಇದನ್ನು ಪರೀಕ್ಷಾರ್ಥ ಜಾರಿ ಮಾಡಲಾಗಿತ್ತು. ಇದು ಯಶಸ್ಸು ಕಂಡ ಕಾರಣದಿಂದ ವಿಶ್ವಕಪ್‍ನ ಫೈನಲ್ ಪಂದ್ಯ ಸೇರಿದಂತೆ ಒಟ್ಟು 7 ನಾಕೌಟ್ ಪಂದ್ಯದಲ್ಲಿ ಅಂಪೈರ್ ಆಡಿಯೋ ಫೀಡ್  ಪ್ರಸಾರ ಮಾಡಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com