ಅರ್ಜುನ್‍ ತೆಂಡುಲ್ಕರ್ ಗೆ ವಾಸಿಂ ಅಕ್ರಂ ಬೌಲಿಂಗ್ ಟಿಪ್ಸ್

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್‍ಗೆ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಬೌಲಿಂಗ್ ಸಲಹೆ ನೀಡಿದ್ದಾರೆ...
ಅರ್ಜುನ್‍ ತೆಂಡೂಲ್ಕರ್
ಅರ್ಜುನ್‍ ತೆಂಡೂಲ್ಕರ್

ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್‍ಗೆ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಬೌಲಿಂಗ್ ಸಲಹೆ ನೀಡಿದ್ದಾರೆ.

ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್‍ರೈಡರ್ಸ್ ತಂಡದ ಅಭ್ಯಾಸದ ವೇಳೆ ಅರ್ಜುನ್ ತೆಂಡೂಲ್ಕರ್‍ಗೆ ಕೆಕೆಆರ್‍ನ ಕೋಚ್ ವಾಸಿಂ ಅಕ್ರಮ್ ಬೌಲಿಂಗ್ ಟಿಪ್ಸ್ ನೀಡಿದರು. ಈ ವೇಳೆ ಸಚಿನ್ ಅವರು ಕ್ರೀಡಾಂಗಣದಲ್ಲಿ ಅರ್ಜುನ್ ಸಲಹೆ ಪಡೆಯುತ್ತಿರುವುದನ್ನು ವೀಕ್ಷಿಸುತ್ತಿದ್ದರು.

ಈ ಬಗ್ಗೆ ಮಾತನಾಡಿದ ವಾಸಿಂ ಅಕ್ರಮ್, ಕಳೆದ ವರ್ಷ ಅರ್ಜುನ್ ರನ್ನು ಇಂಗ್ಲೆಂಡ್‍ನಲ್ಲಿ ಬೇಟಿ ಮಾಡಿದ್ದೆ. ಅಲ್ಲಿ ಪ್ರದರ್ಶನ ಪಂದ್ಯದಲ್ಲಿ ಆಡಿದ್ದರು. ಆಗ ಅರ್ಜುನ್ ಬೌಲಿಂಗ್ ಮಾಡುವಾಗ ನಾನು ಮಿಡ್ ಆನ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದೆ. ಆ ವೇಳೆ ಅರ್ಜುನ್ ಬ್ರಿಯಾನ್ ಲಾರಾ ಅವರನ್ನು ಔಟ್ ಮಾಡಿದ. ಕೇವಲ 15 ವರ್ಷದ ಆಟಗಾರನಾಗಿದ್ದ ಅರ್ಜುನ್ ಬಹಳ ಆಸಕ್ತಿ ಹೊಂದ್ದಿದ್ದ. ಆತ ಎಡಗೈ ಮಧ್ಯಮ ವೇಗದ ಬೌಲರ್ ಆಗಿದ್ದು, ಬೌಲಿಂಗ್ ಶೈಲಿ ಹಾಗೂ ಸ್ವಿಂಗ್‍ನ ಬಗ್ಗೆ ಸಲಹೆ ನೀಡಿದೆ. ಅಲ್ಲದೆ ಪ್ರಮುಖವಾಗಿ ಫಿಟ್ನೆಸ್ ಬಗೆಗೆ ಸಲಹೆ ನೀಡಿದೆ. ಕಲಿಯುವ ಆಸಕ್ತಿ ಇರುವುದು ಮುಖ್ಯವಾದ ಅಂಶವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com