ವಿಶ್ವ ಮಾರುಕಟ್ಟೆಯ 6ನೇ ಪ್ರಭಾವಿ ಕ್ರೀಡಾಪಟು ವಿರಾಟ್ ಕೊಹ್ಲಿ

ವಿವಿಧ ದೇಶಗಳಲ್ಲಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಸೆಳೆಯಬಲ್ಲ ವಿಶ್ವಮಟ್ಟದ ಕ್ರೀಡಾಪಟುಗಳ ಪಟ್ಟಿಯನ್ನು....
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ನವದೆಹಲಿ: ವಿವಿಧ ದೇಶಗಳಲ್ಲಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಸೆಳೆಯಬಲ್ಲ ವಿಶ್ವಮಟ್ಟದ ಕ್ರೀಡಾಪಟುಗಳ ಪಟ್ಟಿಯನ್ನು ಬ್ರಿಟನ್ ನ ವಾಣಿಜ್ಯ ನಿಯತಕಾಲಿಕೆ ಸ್ಪೋರ್ಟ್ಸ್ ಪ್ರೋ ಸಂಸ್ಥೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ 6 ನೇ ಸ್ಥಾನ ಪಡೆದಿದ್ದಾರೆ. ಭಾರತದ ಮತ್ತೊಬ್ಬ ವಿಶ್ವದ ನಂ.1  ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, 44 ನೇ ಸ್ಥಾನ ಪಡೆದಿದ್ದಾರೆ.

ಮಾರುಕಟ್ಟೆ ಮೇಲೆ ವಿವಿಧ ದೇಶಗಳ ಪ್ರಮುಖ ಕ್ರೀಡಾಪಟುಗಳು ಬೀರುವ ಪರಿಣಾಮದ ಬಗ್ಗೆ ಸ್ಪೋರ್ಟ್ಸ್ ಪ್ರೋ ಸಂಸ್ಥೆ ಪ್ರತಿ ವರ್ಷವೂ ಅಧ್ಯಯನ ನಡೆಸುತ್ತದೆ. ಅಧ್ಯಯನ ವರದಿಯನ್ನಾಧರಿಸಿ ವಾಣಿಜ್ಯ ಉತ್ಪನ್ನಗಳ ಮಾರಾಟದ ವಿಷಯದಲ್ಲಿ ಗ್ರಾಹಕರ ಮೇಲೆ ಗಾಢ ಪ್ರಭಾವ ಬೀರುವ ಪ್ರಭಾವಿ ಕ್ರೀಡಾಪಟುಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪ್ರಸಕ್ತ ಸಾಲಿನ ಈ ಪಟ್ಟಿ ಬಿಡುಗಡೆಯಾಗಿದ್ದು ಭಾರತದ ಕೊಹ್ಲಿ ಹಾಗೂ ಸೈನಾ ನೆಹ್ವಾಲ್ ಸ್ಥಾನ ಪಡೆದಿದ್ದಾರೆ.

ಕ್ರೀಡಾಪಟುಗಳ ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಮೇಲೆ ಹೊಂದಿರುವ ಗಾಢ ಪ್ರಭಾವವಷ್ಟೇ ಅಲ್ಲದೆ, ಮುಂದಿನ ಮೂರು ವರ್ಷಗಳವರೆಗೆ ಅವರು ಬೀರಬಹುದಾದ ಪ್ರಭಾವವನ್ನು ಅಂದಾಜಿಸಿ ಪಟ್ಟಿ ತಯಾರಿಸಲಾಗಿದೆ ಎಂದು ಸ್ಪೋರ್ಟ್ಸ್ ಪ್ರೋ ಸಂಸ್ಥೆ ತಿಳಿಸಿದೆ.

ಬ್ರಿಟನ್ ನ ಟೆನಿಸ್ ಆಟಗಾರ ಯೂಜಿನ್ ಬೌಚಾರ್ಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಬ್ರೆಜಿಲ್ ಫುಟ್ ಬಾಲ್ ತಂಡದ ಅಗ್ರಗಣ್ಯ ಆಟಗಾರ ನೇಮಾರ್ ಅವರು ಸ್ಪೋರ್ಟ್ ಪ್ರೋ ಹೊರತಂದಿರುವ ಪಟ್ಟಿಯಲ್ಲಿ 2 ನೇ ಸ್ಥಾನ ಪಡೆದಿದ್ದಾರೆ. ಅಮೆರಿಕಾದ ಗಾಲ್ಫ್ ಆಟಗಾರ ಜೋರ್ಡಾನ್ ಸ್ಪೆತ್ 3 ನೇ ಸ್ಥಾನ, ಅಮೇರಿಕಾದ ಈಜುಪಟು ಮಿಸ್ಸಿ ಫ್ರಾಕ್ಲಿನ್ 4 , ಬ್ರಿಟನ್ ನ ಎಫ್ 1 ಆಟಗಾರ ಲೀವಿಸ್ ಹ್ಯಾಮಿಲ್ಟನ್ ಐದನೇ ಸ್ಥಾನದಲ್ಲಿದ್ದಾರೆ. ಜಮೈಕಾದ ಓಟಗಾರ ಹಾಗೂ ಒಲಂಪಿಕ್ಸ್ ಚಾಂಪಿಯನ್ ಉಸೇನ್ ಬೋಲ್ಟ್ ಪಟ್ಟಿಯ 10 ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com