

ಮೈಸೂರು: ಪ್ರತಿಷ್ಠಿತ ರಣಜಿ ಪಂದ್ಯಾವಳಿಯ ಆರನೇ ಸುತ್ತಿನ ಪಂದ್ಯಗಳು ಶನಿವಾರದಿಂದ ಶುರುವಾಗುತ್ತಿದ್ದು ಹಾಲಿ ಚಾಂಪಿಯನ್ ಕರ್ನಾಟಕ, ಪ್ರವಾಸಿ ಒಡಿಶಾ ತಂಡವನ್ನು ಮಣಿಸುವ ಭರವಸೆಯಲ್ಲಿದೆ.
ಪ್ರಸಕ್ತ ಟೂರ್ನಿಯ ಮೊದಲ ಹಂತದ ನಾಲ್ಕು ಪಂದ್ಯಗಳಲ್ಲಿ ಗೆಲುವು ಕಾಣದೆ ಹೋದರೂ, ಸೋಲು ಹತ್ತಿರ ಸುಳಿಯದಂತೆ ನೋಡಿಕೊಂಡ ಕರ್ನಾಟಕ ತಂಡ, ಜೈಪುರದಲ್ಲಿ ನಡೆದ ರಾಜಸ್ಥಾನ ವಿರುದ್ಧ ಭರ್ಜರಿ 92 ರನ್ ಗೆಲುವು ಸಾಧಿಸುವ ಮೂಲಕ ತನ್ನ ನಾಕೌಟ್ ಬಯಕೆಯನ್ನು ಜೀವಂತವಾಗಿಟ್ಟಿದೆ. ರಾಜಸ್ಥಾನ ವಿರುದ್ಧದ ಗೆಲುವು ಸಹಜವಾಗಿಯೇ ವಿನಯ ಪಡೆಯಲ್ಲಿ ಹೊಸ ಹುರುಪು ತಂದಿದೆ. ಇಲ್ಲಿನ ಮಾನಸಗಂಗೋತ್ರಿ ತಪ್ಪಲಿನಲ್ಲಿರುವ ಗಂಗೋತ್ರಿ ಗ್ಲೇಡ್ಸ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ನಾಕೌಟ್ ಹಂತದಲ್ಲಿನ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ವಿನಯ್ ಪಡೆ ಸಜ್ಜಾಗಿದೆ.
ಅಂದಹಾಗೆ ಎ ಗುಂಪಿನ ಅಂಕಪಟ್ಟಿಯಲ್ಲಿ ಕರ್ನಾಟಕ 5 ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ನಾಕೌಟ್ ಹಂತದಲ್ಲಿನ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ವಿನಯ್ ಪಡೆ ಸಜ್ಜಾಗಿದೆ. ಅಂದಹಾಗೆ ಎ ಗುಂಪಿನ ಅಂಕಪಟ್ಟಿಯಲ್ಲಿ ಕರ್ನಾಟಕ 5 ಪಂದ್ಯಗಳಲ್ಲಿ 1 ರಲ್ಲಿ ಗೆಲುವು ಮತ್ತು 3 ರಲ್ಲಿ ಡ್ರಾ ಸಾಧಿಸಿರುವ ಒಡಿಶಾ 9 ಅಂಕಗಳೊಂದಿಗೆ 7 ನೇ ಸ್ಥಾನದಲ್ಲಿದೆ.
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಶತಕ ದಾಖಲಿಸಿದ್ದ ರಾಬಿನ್ ಉತ್ತಪ್ಪ ಈ ಋತುವಿನಲ್ಲಿ ರಾಜ್ಯಕ್ಕೆ ಮೊದಲ ಜಯ ತಂದುಕೊಡುವಲ್ಲಿ ಫಲಪ್ರದವಾಗಿದ್ದರು. ಇದೇ ಫಾರ್ಮ್ ನ್ನು ಮುಂದುವರೆಸುವ ಭರವಸೆ ಅವರದ್ದು. ಇನ್ನು ಅಲ ರೊಉಂಡರ್ ಸ್ಟುವರ್ಟ್ ಬಿನ್ನಿ ಎಸ್ ಅರವಿಂದ್ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಸಹಕಾರಿಯಾಗಿದ್ದರು.
ಈ ಮಧ್ಯೆ ಆಲ್ ರೌಂಡರ್ ಮನೀಶ್ ಪಾಂಡೆ ಗಾಯಾಳುವಾಗಿದ್ದು ಪಂದ್ಯಕ್ಕೆ ಅಳಭ್ಯವಾಗಿದ್ದಾರೆ. ಇದು ಸಹಜವಾಗಿಯೇ ತಂಡದ ಬ್ಯಾಟಿಂಗ್ ಗೆ ಕೊಂಛ ಹಿನ್ನಡೆ ತಂದಿದೆ ಎಂದೆನಿಸಿದರೂ, ಕರುಣ್ ನಾಯರ್, ಆರ್, ಸಾಮರ್ಥ್, ಸಿಎಂ ಗೌತಮ್ ರಂಥವರನ್ನು ಒಳಗೊಂಡಿರುವ ಕರ್ನಾಟಕ ಬ್ಯಾಟಿಂಗ್ ಲೈನಪ್ ಒಡಿಶಾ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸುವಷ್ಟು ಸಶಕ್ತವಾಗಿದೆ. ಇನ್ನು ಬಿಪ್ಲಬ್ ಸಮಂಟ್ರೆ ಸಾರಥ್ಯ ಪ್ರವಾಸಿ ತಂಡ ಸಂಕಷ್ಟದಲ್ಲಿದ್ದು, ನಾಕೌಟ್ ತಲುಪಲು ಕರ್ನಾಟಕ ಸೇರಿದಂತೆ ಮಿಕ್ಕ ಪಂದ್ಯಗಳನ್ನೂ ಜಯಿಸಬೇಕಿದೆ.