ಒಡಿಶಾ ವಿರುದ್ಧದ ಈ ಅಭೂತಪೂರ್ವ ಗೆಲುವಿನಿಂದಾಗಿ ಕರ್ನಾಟಕ `ಎ' ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಒಟ್ಟು 6 ಪಂದ್ಯಗಳನ್ನಾಡಿರುವ ಅದು 2ರಲ್ಲಿ ಗೆಲುವು ಹಾಗೂ 4 ಪಂದ್ಯಗಳಲ್ಲಿ ಡ್ರಾ ಸಾಧಿಸುವ ಮುಖೇನ ಒಟ್ಟು 21 ಅಂಕಗಳನ್ನು ಗಳಿಸಿದ್ದರೆ, ಇಷ್ಟೇ ಪಂದ್ಯಗಳಿಂದ 3ರಲ್ಲಿ ಗೆಲುವು ಮತ್ತು ಇನ್ನು ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ದೆಹಲಿ 24 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ಅಂದಹಾಗೆ ಲೀಗ್ ಹಂತದ ತನ್ನ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ, ಅಂಕಪಟ್ಟಿಯ ಟಾಪರ್ ದೆಹಲಿ ತಂಡವನ್ನು ಎದುರಿಸಲಿದ್ದು, ಇದೇ 23ರಿಂದ ಶುರುವಾಗಲಿರುವ ಈ ಪಂದ್ಯವು ಹುಬ್ಬಳ್ಳಿಯ ರಾಜನಗರದ ಕೆಎಸ್‍ಸಿಎ ಮೈದಾನದಲ್ಲಿ ನಡೆಯಲಿದೆ.