ವೀನಸ್ ವಿಲಿಯಮ್ಸ್ ಸಾಧನೆ

ಅಮೆರಿಕದ ಹಿರಿಯ ಟೆನಿಸ್ ತಾರೆ ವೀನಸ್ ವಿಲಿಯಮ್ಸ್ ನೂತನ ಡಬ್ಲ್ಯೂಟಿಎ ರ್ಯಾಂಕಿಂಗ್ ಪಟ್ಟಿಯಲ್ಲಿ 7ನೇ ಸ್ಥಾನ...
ವೀನಸ್ ವಿಲಿಯಮ್ಸ್
ವೀನಸ್ ವಿಲಿಯಮ್ಸ್

ನ್ಯೂಯಾರ್ಕ್: ಅಮೆರಿಕದ ಹಿರಿಯ ಟೆನಿಸ್ ತಾರೆ ವೀನಸ್ ವಿಲಿಯಮ್ಸ್ ನೂತನ ಡಬ್ಲ್ಯೂಟಿಎ ರ್ಯಾಂಕಿಂಗ್ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದು, ಈ ಮೂಲಕ ಅಗ್ರ 10ರಲ್ಲಿ ಸ್ಥಾನ ಪಡೆದ ಅತ್ಯಂತ ಹಿರಿಯ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 

ಈ ಮೊದಲು 11ನೇ ಸ್ಥಾನದಲ್ಲಿದ್ದ ವೀನಸ್ ಈಗ ಒಟ್ಟು 3790 ಅಂಕಗಳೊಂದಿಗೆ 4 ಸ್ಥಾನಗಳ ಬಡ್ತಿ ಪಡೆದುಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ವೀನಸ್ ಸಹೋದರಿ ಸೆರೆನಾ ವಿಲಿಯಮ್ಸ್ 9945 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. 
ರೊಮೇನಿಯಾದ ಸಿಮೋನಾ ಹಾಲೆಪ್ 6060 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಆ ಮೂಲಕ ಸೆರೆನಾಗೆ ಅಗ್ರಸ್ಥಾನಕ್ಕೆ ಯಾವುದೇ ಸನಿಹ ಸ್ಪರ್ಧಿ ಇಲ್ಲದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com