

ನ್ಯೂಯಾರ್ಕ್: ಆಲ್ ಸ್ಟಾರ್ಸ್ ಟಿ೨೦ ಪಂದ್ಯಾವಳಿಯ ಮೊದಲೆರಡು ಸುತ್ತಿನ ಪಂದ್ಯಗಳಲ್ಲಿ ಸೋಲನುಭವಿಸಿರುವ ಸಚಿನ್ ಬ್ಲಾಸ್ಟರ್ಸ್ ತಂಡ ಶನಿವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಕ್ಲೀನ್ಸ್ವೀಪ್ ಭೀತಿಗೆ ಗುರಿಯಾಗಿದೆ.
ಮೊದಲ ಪಂದ್ಯದಲ್ಲಿ ೬ ವಿಕೆಟ್ಗಳಿಂದ ಜಯಿಸಿದ ಶೇನ್ವಾರ್ನ್ ವಾರಿಯರ್ಸ್ ತಂಡ, ಎರಡನೇ ಪಂದ್ಯದಲ್ಲಿ ೫೭ ರನ್ ಗೆಲುವು ದಾಖಲಿಸಿತ್ತು. ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ ೮ ಗಂಟೆಗೆ ಜರುಗಲಿದ್ದು, ವೈಟ್ವಾಶ್ ಗುರಿ ಹೊತ್ತಿರುವ ಶೇನ್ ವಾರ್ನ್ ಪಡೆಗೆ ಸಚಿನ್ ಬ್ಲಾಸ್ಟರ್ಸ್ ತಿರುಗೇಟು ನೀಡುತ್ತದೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.