

ಬೆಂಗಳೂರು: ತಂಡದ ಭರವಸೆಯ ರೈಡರ್ ಪ್ರಶಾಂತ್ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಕರ್ನಾಟಕ ಕಬಡ್ಡಿ ತಂಡ 63ನೇ ರಾಷ್ಟ್ರೀಯ ಹಿರಿಯರ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಶುಭಾರಂಭ ಮಾಡಿದೆ.
ಮಂಗಳವಾರ ಮಲ್ಲೇಶ್ವರದ ಆಟದ ಮೈದಾನದಲ್ಲಿ ಆರಂಭವಾದ ಟೂರ್ನಿಯ ಪುರುಷರ ಭಾಗದ ಇ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರಖಂಡ ವಿರುದ್ಧ 27-22 ಅಂಕಗಳ ತರದಲ್ಲಿ ಜಯಿಸಿತು.ಕರ್ನಾಟಕ ತಂಡದ ಪರ ಪ್ರಶಾಂತ್ ರೈಡಿಂಗ್ ಮೂಲಕ 12 ಅಂಕಗಳನ್ನು ಖಲಿಸಿದರೆ, ಖ್ಯಾತ ರಕ್ಷಣಾತ್ಮಕ ಆಟಗಾರ ರಾಜಗುರು ಕ್ಯಾಚಿಂಗ್ ಮೂಲಕ 4 ಅಂಕಗಳನ್ನು ಸಂಪಾದಿಸಿದರು.
ಇನ್ನು ಮಹಿಳೆಯರ ವಿಭಾಗದ ಪಂದ್ಯದಲ್ಲೂ ರಾಜ್ಯ ತಂಡ ಶುಭಾರಂಭ ಮಾಡಿದೆ. ಎ ಗುಂಪಿನ
ಪಂದ್ಯದಲ್ಲಿ ಕರ್ನಾಟಕ ವನಿತೆಯರು ಬಂಗಾಳ ಅಮೆಚ್ಯೂರ್ ಕಬಡ್ಡಿ ಸಂಸ್ಥೆ ತಂಡದ ವಿರುದ್ಧ 2-14 ಅಂಕಗಳ ಅಂತರದಲ್ಲಿ ಮಣಿಸಿತು. ರಾಜ್ಯ ತಂಡದ ಪರ ರಕ್ಷಣಾತ್ಮಕ ವಿಭಾಗದಲ್ಲಿ ಸುಶ್ಮಿತಾ ಅತ್ಯುತ್ತಮ ಕ್ಯಾಚಿಂಗ್ ಮೂಲಕ 8 ಅಂಕಗಳನ್ನು ಸಂಪಾದಿಸಿದರೆ, ರೈಡರ್ ಉಷಾ ಅವರು 6 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಬಹಳ ವರ್ಷ ನಂತರ ಮೊದಲ ರಿಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಬಡ್ಡಿ ಟೂರ್ನಿ ಆತಿಥ್ಯ ಲಬಿsಸಿದೆ. ಈ ಟೂರ್ನಿಯನ್ನು ಅಮೆಚ್ಯೂರ್ ಬಡ್ಡಿ ಫೌಂಡೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದೆ. ಈಪ್ರತಿಷ್ಠಿತ ಟೂರ್ನಿಯಲ್ಲಿ 1200ಕ್ಕೂ ಹೆಚ್ಚು ಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಿರಿಮೆ ಹೊಂದಿರುವ ಕ್ರೀಡಾಳುಗಳು ಭಾಗವಹಿಸುತ್ತಿದ್ದು, 33 ರಾಜ್ಯಗಳ ತಂಡಗಳು ಪಾಲ್ಗೊಳ್ಳುತ್ತಿದ್ದಾರೆ.