

ಸಿಂಗಪುರ: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ, ಅಮೆರಿಕದ ಸೆರೆನಾ ವಿಲಿಯಮ್ಸ್ ಈ ವರ್ಷದ ಟೆನಿಸ್ ಋತುವಿಗೆ ವಿದಾಯ ಹೇಳಿದ್ದಾರೆ.
ವರ್ಷದ ಮೂರು ಗ್ರಾಂಡ್‍ಸ್ಲಾಮ್ ಪ್ರಶಸ್ತಿ ಜಯಿಸಿದ ಸೆರೆನಾ, ದೈಹಿಕವಾಗಿ ಸಾಕಷ್ಟು ಬಳಲಿದ್ದು ವಿಶ್ರಾಂತಿ ಪಡೆಯಲು ಈ ನಿರ್ಧಾರ ಕೈಗೊಂಡಿರುವು ದಾಗಿ ತಿಳಿಸಿದ್ದಾರೆ.
ಹಾಗಾಗಿ, ಅವರು ಅ. 25 ರಿಂದ ಆರಂಭವಾಗುವ ಡಬ್ಲ್ಯೂಟಿಎ ಫೈನಲ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಯುಎಸ್ ಓಪನ್ ಸೆಮಿಸ್ ನಲ್ಲಿ ಸೋಲುವ ಮೂಲಕ, ವರ್ಷದಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು.