ಬೆಂಗಳೂರು: ಪಂದ್ಯದ ಮೊದಲ ತಾಸಿನಲ್ಲಿ ಕರ್ನಾಟಕದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ನಲುಗಿದ ಬಂಗಾಳ ತಂಡಕ್ಕೆ ಮಧ್ಯಮ ಕ್ರಮಾಂಕಿತ ಬ್ಯಾಟ್ಸ್‍ಮನ್ ಸುದೀಪ್ ಚಟರ್ಜಿ (145 ರನ್, 247 ಎಸೆತ, 16 ಬೌಂಡರಿ) ಅವರ ಆಕರ್ಷಕ ಶತಕ, ವಿಕೆಟ್‍ಕೀಪರ್ ವೃಧಿಮಾನ್ ಸಾಹ (90) ಅವರ ಮನೋಜ್ಞ 173 ರನ್ ಜತೆಯಾಟ ಶ್ರೀರಕ್ಷೆಯಾಗಿ ಪರಿಣಮಿಸಿತು. ಆ ಮೂಲಕ ಪಂದ್ಯದ ಮೊದಲ ದಿನದಾಟದಲ್ಲಿ ಆತಿಥೇಯರನ್ನು ಕಾಡಿದ ಅದು ಉತ್ತಮ ಮೊತ್ತ ಪೇರಿಸುವಲ್ಲಿ ಸಫಲವಾಯಿತು.