ಕ್ರಿಸ್ ಗೇಲ್ ಇನ್‌ಸ್ಟಾಗ್ರಾಮ್ ಕಿಂಗ್

ಕ್ರಿಸ್‍ಗೇಲ್ ಬ್ಯಾಟ್ ಹಿಡಿದು ನಿಂತರೆ ಸಿಕ್ಸರ್‍ಗಳ ಮೇಲೆ ಸಿಕ್ಸರ್ ಬೀಳುತ್ತವೆ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರುವ ವಿಷಯ...
ಕ್ರಿಸ್ ಗೇಲ್
ಕ್ರಿಸ್ ಗೇಲ್
Updated on: 
ಕ್ರಿಸ್‍ಗೇಲ್ ಬ್ಯಾಟ್ ಹಿಡಿದು ನಿಂತರೆ ಸಿಕ್ಸರ್‍ಗಳ ಮೇಲೆ ಸಿಕ್ಸರ್ ಬೀಳುತ್ತವೆ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರುವ ವಿಷಯ. ಹಾಗೆಯೇ ಅವರು ತಮ್ಮ ಚಿತ್ರಗಳನ್ನು ಸೆರೆಹಿಡಿದು ಇನ್‌ಸ್ಟಾಗ್ರಾಮ್ ಗೆ ಅಪ್‍ಲೋಡ್ ಮಾಡುತ್ತಾರೆ ಎಂಬುದು ಗೊತ್ತೆ? 
ಕನಿಷ್ಠ ದಿನಕ್ಕೆ ಎರಡು ಸೆಲ್ಫಿಗಳನ್ನು ಅಪ್‍ಲೋಡದೇ ಇರುವುದಿಲ್ಲ ಈ ಭರ್ಜರಿ ಬ್ಯಾಟ್ಸ್‍ಮನ್. ಎರಡು ವರ್ಷಗಳ ಹಿಂದೆ ಮೊದಲ ಬಾರಿಗೆ ಇನ್‍ಸ್ಟಾಗ್ರಾಮ್ ಬಳಸಿದ್ದು. chrisgayle333 ಇದು ಅವರ ಅಕೌಂಟ್ ಹೆಸರು. ಆಮೇಲೆ ತನ್ನ ದೈನಂದಿನ ಬದುಕಿನ ಯಾವುದೇ ಚಿತ್ರಗಳಿದ್ದರೂ ಅವುಗಳನ್ನು ಹಿಂಜರಿಕೆ ಇಲ್ಲದೇ ಆನ್‍ಲೈನ್‍ನಲ್ಲಿ ಹಂಚಿಕೊಂಡಿದ್ದಾರೆ. 
ಇತ್ತೀಚೆಗೆ ತಮ್ಮ ಜಮೈಕಾದ ಮನೆಯಲ್ಲಿರುವ ಡಾನ್ಸಿಂಗ್ ಪೋಲ್‍ನ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಮನೆಯಲ್ಲಿ ಸ್ಟ್ರಿಪ್ ಇಲ್ಲದಿದ್ದರೆ, ಅಂಥವರು ಕ್ರಿಕೆಟ್ ಆಟಗಾರರೇ ಅಲ್ಲವೆಂದು ಬರೆದಿದ್ದರು! 600ಕ್ಕೂ ಹೆಚ್ಚು ಫೋಟೋಗಳನ್ನು ಇನ್‍ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಗೇಲ್ ಗೆ 3.45 ಲಕ್ಷ ಹಿಂಬಾಲಕರಿದ್ದಾರೆ. ಕ್ರೀಡಾಪಟುಗಳು ಇನ್‍ಸ್ಟಾಗ್ರಾಮ್ನಲ್ಲಿ ಈ ಪ್ರಮಾಣದಲ್ಲಿ ಸಕ್ರಿಯರಾಗಿರುವ ಮತ್ತೊಬ್ಬರಿಲ್ಲವಂತೆ. ಅದಕ್ಕೆ ಈತನನ್ನು ಇನ್‍ಸ್ಟಾಗ್ರಾಮ್ ಕಿಂಗ್ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com