ರಾಜ್ಯ

ಚಿಕ್ಕಬಳ್ಳಾಪುರ: ಪಾರ್ಕ್, ಖಾಲಿ ಜಾಗವನ್ನೇ ಸೈಟ್ ಮಾಡಿ, ಖಾಸಗಿಯವರಿಗೆ ಇ-ಸ್ವತ್ತು ವಿತರಣೆ, PDO ಸಸ್ಪೆಂಡ್!

ಚಿಕ್ಕಬಳ್ಳಾಪುರ: ಪಾರ್ಕ್, ಖಾಲಿ ಜಾಗವನ್ನೇ ಸೈಟ್ ಮಾಡಿ, ಖಾಸಗಿಯವರಿಗೆ ಇ-ಸ್ವತ್ತು ವಿತರಣೆ, PDO ಸಸ್ಪೆಂಡ್!
ಪಿಡಿಒ ಎ. ಭಾಗ್ಯಲಕ್ಷ್ಮಿ
Published On :

ಚಿಕ್ಕಬಳ್ಳಾಪುರ: ಉದ್ಯಾನವನ ಹಾಗೂ ಖಾಲಿ ಜಾಗ, ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನ ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರಿಗೆ ಇ-ಸ್ವತ್ತು ಖಾತೆಗಳನ್ನು ವಿತರಿಸಿದ ಆರೋಪದ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಎ. ಭಾಗ್ಯಲಕ್ಷ್ಮಿ ಅವರನ್ನು ಅಮಾನತುಗೊಂಡವರು.

ಬಾಗೇಪಲ್ಲಿ ವಕೀಲ ಎನ್‌. ನಾಗಭೂಷಣ್ ಅವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಅನುಮೋದಿತ ನಕ್ಷೆಯಲ್ಲಿ ಕೇವಲ 17 ನಿವೇಶನಗಳಿಗೆ ಅವಕಾಶವಿದ್ದರೂ, ಪಾರ್ಕ್‌ಗೆ (Park) ಮೀಸಲಿಟ್ಟ ಜಾಗದಲ್ಲಿ ಹೆಚ್ಚುವರಿಯಾಗಿ 6 ನಿವೇಶನಗಳನ್ನ ಸೃಷ್ಟಿಸಿ ಇ-ಸ್ವತ್ತು ವಿತರಿಸಿರುವುದು ಪತ್ತೆಯಾಗಿದೆ.

ಅಲ್ಲದೇ, ಅಗತ್ಯ ದಾಖಲೆಗಳನ್ನ ಪರಿಶೀಲಿಸದೇ ಸುಮಾರು 14 ಇ-ಸ್ವತ್ತುಗಳಿಗೆ ಮ್ಯುಟೇಷನ್ ಮಾಡಿರುವುದು ಹಾಗೂ ಭೂ ಪರಿವರ್ತನೆ ಆದೇಶ, ಅನುಮೋದಿತ ಲೇಔಟ್ ನಕ್ಷೆ ಇಲ್ಲದೆ ಇ-ಸ್ವತ್ತು ವಿತರಿಸಿರುವ ಲೋಪಗಳೂ ತನಿಖೆಯಲ್ಲಿ ಬೆಳಕಿಗೆ ಬಂದಿವೆ.

ಈ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿದ್ದರೂ, ಪಿಡಿಒ ಸಲ್ಲಿಸಿದ ಸಮಜಾಯಿಷಿ ಸಮಂಜಸವಾಗಿಲ್ಲ ಎಂದು ಪರಿಗಣಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ ನವೀನ್ ಭಟ್‌ ಅವರು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.

ಅಮಾನತು ಅವಧಿಯಲ್ಲಿ ಭಾಗ್ಯಲಕ್ಷ್ಮಿ ಅವರ ಲೀನ್ ಅನ್ನು ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಗ್ರಾಮ ಪಂಚಾಯಿತಿಗೆ ವರ್ಗಾಯಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.