ಪಿಸ್ಟೋರಿಯಸ್‍ಗೆ ಪೆರೋಲ್

ಪ್ರೇಯಸಿ ರೀವಾ ಸ್ಟೀನ್‍ಕಾಂಪ್ ಅವರನ್ನು ಕೊಂದ ಆರೋಪದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಖ್ಯಾತ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್...
ಆಸ್ಕರ್ ಪಿಸ್ಟೋರಿಯಸ್
ಆಸ್ಕರ್ ಪಿಸ್ಟೋರಿಯಸ್
ಜೊಹಾನ್ಸ್‍ಬರ್ಗ್: ಪ್ರೇಯಸಿ ರೀವಾ ಸ್ಟೀನ್‍ಕಾಂಪ್ ಅವರನ್ನು ಕೊಂದ ಆರೋಪದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಖ್ಯಾತ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಅಕ್ಟೋಬರ್ 20 ರಂದು ಪೆರೋಲ್ ಮೇಲೆ ಬಿಡುಗಡೆಯಾಗಲಿದ್ದಾರೆ. 
ಜೈಲಿನಿಂದ ಬಿಡುಗಡೆಯಾದರೂ, ಮುಂದಿನ ಮಂಗಳವಾರದಿಂದ ಅವರು ಗೃಹಬಂಧನದಲ್ಲಿ ಇರಲಿದ್ದಾರೆ ಎಂದು ಡಿಪಾರ್ಟ್‍ಮೆಂಟ್ ಆಫ್ ಕರೆಕ್ಷನಲ್ ಸರ್ವಿಸ್ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
2013ರ ಫೆ. 14ರ ಪ್ರೇಮಿಗಳ ದಿನದಂದೇ ಈ ಹತ್ಯೆ ನಡೆದಿತ್ತು. ಆದರೆ ಈ ಹತ್ಯೆಯನ್ನು ಉದ್ದೇಶಪೂರ್ವಕವಾಗಿ ಮಾಡದೆ, ಮನೆಗೆ ದರೋಡೆಕೋರರು ನುಗ್ಗಿದ್ದಾರೆಂದು ಭಾವಿಸಿ ಗುಂಡು ಹಾರಿಸಿದ್ದಾಗಿ ಪಿಸ್ಟೋರಿಯಸ್ ಕೋರ್ಟ್‍ನಲ್ಲಿ ವಾದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com