ಶಾಂಘೈ: ಭಾರತದ ಯುವ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಲುಕಾಸ್ ಕುಬೊಟ್ ಜೋಡಿಯು, ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಿಂದ ಹೊರಬಿದ್ದಿದೆ.
ಭಾನುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ಪೋಲೆಂಡ್ ಜೋಡಿ, ಟೂರ್ನಿಯ 6ನೇ ಶ್ರೇಯಾಂಕಿತ ಜೋಡಿಯಾದ ದಕ್ಷಿಣ ಆಫ್ರಿಕಾದ ರಾವೆನ್ ಕ್ಲಾಸೆನ್ ಹಾಗೂ ಬ್ರೆಜಿಲ್‍ನ ಮಾರ್ಸೆಲೊ ಮೆಲೊ ವಿರುದ್ಧ 6-3, 6-7 (1-7), 10-7 ಸೆಟ್‍ಗಳ ಅಂತರದಲ್ಲಿ ಸೋಲು ಕಂಡಿತು.
ಇದೇ ವರ್ಷ ಜೋಡಿಯಾಗಿದ್ದ ರೋಹನ್ ಬೋಪಣ್ಣ ಹಾಗೂ ಲುಕಾಸ್ ಕುಬೊಟ್ ಗೆ ಇದೇ ಟೂರ್ನಿ ಮೊದಲ ಸವಾಲಾಗಿತ್ತು.