ಮಾರಿಯಾ ಶರಪೊವಾ ಮುನ್ನಡೆ, ಸಿಮೋನಾ ಹಾಲೆಪ್‍ಗೆ ಆಘಾತ

ವಿಶ್ವದ ಅಗ್ರಶ್ರೇಯಾಂಕಿತೆ ರಷ್ಯಾದ ತಾರೆ ಮಾರಿಯಾ ಶರಪೋವಾ, ಡಬ್ಲ್ಯುಟಿಎ ಟೂರ್ ಫೈನಲ್ಸ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿದ್ದಾರೆ....
ಮಾರಿಯಾ ಶರಪೋವಾ
ಮಾರಿಯಾ ಶರಪೋವಾ
Updated on: 

ಸಿಂಗಾಪುರ: ವಿಶ್ವದ ಅಗ್ರಶ್ರೇಯಾಂಕಿತೆ ರಷ್ಯಾದ ತಾರೆ ಮಾರಿಯಾ ಶರಪೋವಾ, ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಟೂರ್ ಫೈನಲ್ಸ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿದ್ದಾರೆ.

ರೌಂಡ್ ರಾಬಿನ್ ಮಾದರಿಯ ಟೂರ್ನಿಯ ಮೂರನೇ ಪಂದ್ಯದಲ್ಲಿ ಮಿಂಚಿದ 3ನೇ ಶ್ರೇಯಾಂಕಿತೆ ಶರಪೋವಾ, 7-5, 6-1 ಅಂತರದ ನೇರ ಸೆಟ್‌ಗಳಿಂದ ಅಮೆರಿಕ ಓಪನ್ ಚಾಂಪಿಯನ್ ಇಟಲಿಯ ಫ್ಲಾವಿಯಾ ಪೆನೆಟಾ ಅವರನ್ನು ಬಗ್ಗು ಬಡಿದರು.

ದಿನದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಗಮನ ಸೆಳೆದ ಪೋಲೆಂಡಿನ ಆಗ್ನೆಸ್ಕಾ ರಾಡ್ವಾಂಸ್ಕಾ, 7-6(7/5), 6-1 ಅಂತರದ ನೇರ ಸೆಟ್‌ಗಳಿಂದ ಅಗ್ರ ಶ್ರೇಯಾಂಕಿತೆ ರೊಮೇನಿಯಾದ ಸಿಮೋನಾ ಹ್ಯಾಲೆಪ್‌ಗೆ ಆಘಾತ ನೀಡಿದರು.

ಮಹಿಳಾ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡಿನ ಮಾರ್ಟಿನಾ ಹಿಂಗಿಸ್ ಜೋಡಿ 6-3, 6-4 ನೇರ ಸೆಟ್‌ಗಳಿಂದ ಏಳನೇ ಶ್ರೇಯಾಂಕಿತ ಜೆಕ್ ಗಣರಾಜ್ಯದ ಆ್ಯಂಡ್ರೇಯ ಹವಾಕೊವಾ ಮತ್ತು ಲೂಸಿ ಹ್ರಾಡೆಕಾ ಜೋಡಿ ವಿರುದ್ಧ ಜಯ ದಾಖಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com