ಏಷ್ಯನ್ ಬಾಕ್ಸಿಂಗ್: ಸೆಮೀಸ್‍ಗೆ ದೇವೇಂದ್ರೂ

ಕಾಮನ್ವೆಲ್ತ್ ಗೇಮ್ಸ್ ನ ಬೆಳ್ಳಿ ಪದಕ ವಿಜೇತ ಎಲ್. ದೇವೇಂದ್ರೂ ಸಿಂಗ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...
ದೇವೇಂದ್ರೂ ಸಿಂಗ್
ದೇವೇಂದ್ರೂ ಸಿಂಗ್

ಬ್ಯಾಂಕಾಕ್: ಕಾಮನ್ವೆಲ್ತ್ ಗೇಮ್ಸ್ ನ ಬೆಳ್ಳಿ ಪದಕ ವಿಜೇತ ಎಲ್. ದೇವೇಂದ್ರೂ ಸಿಂಗ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೇವೇಂದ್ರೂ ತಮ್ಮ ಪ್ರತಿಸ್ಪರ್ಧಿ ಇಂಡೋನೇಷ್ಯಾದ ಕೊರ್ನೆಲಿಸ್ ಕ್ವಂಗೂ ಲಂಗು ವಿರುದ್ಧ 3-0 ಅಂಕಗಳಿಂದ ಭರ್ಜರಿ ಜಯ ಸಂಪಾದಿಸಿದರು. ಶಿವಥಾಪ 56 ಕೆ.ಜಿ ವಿಭಾಗದಲ್ಲಿ ಕಿರ್ಗಿಸ್ತಾನದ ಒಮುರ್ಬೆಕ್ ವಿರುದ್ಧ 2-1ರ ಜಯ ಸಾಧಿಸಿದರು.

ಇನ್ನು ವಿಕಾಸ್ ಕೃಷ್ಣನ್ 75 ಕೆ.ಜಿ ವಿಭಾಗದಲ್ಲಿ ವಿಯೆಟ್ನಾಂನ ದಿಂಗ್ ಹಾಂಗ್ ವಿರುದ್ಧ 3-0ಯಿಂದ ಗೆದ್ದು ಮುಂದಿನ ಸುತ್ತಿಗೆ ಪ್ರವೇಶಿಸಿದರು. ಈ ಮೂವರು ಬಾಕ್ಸರ್‍ಗಳು ಪದಕ ಖಚಿತಪಡಿಸಿಕೊಳ್ಳುವುದರ ಜತೆಗೆ ವಿಶ್ವ ಚಾಂಪಿಯನ್‍ಶಿಪ್‍ಗೂ ಅರ್ಹತೆ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com