ಶ್ರೀಶಾಂತ್ ಮತ್ತು ಇತರರು ಆರೋಪ ಮುಕ್ತವಾಗಿದ್ದನ್ನು ಪ್ರಶ್ನಿಸಿ ಮೇಲ್ಮನವಿ

ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಸೇರಿದಂತೆ ಇತರರನ್ನು ಆರೋಪ ಮುಕ್ತವಾಗಿಸಿ ತೀರ್ಪು ಪ್ರಶ್ನಿಸಿ ದೆಹಲಿ ಪೊಲೀಸರು ಮೇಲ್ಮನವಿ...
ಶ್ರೀಶಾಂತ್‌
ಶ್ರೀಶಾಂತ್‌
Updated on: 

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಸೇರಿದಂತೆ ಇತರರನ್ನು ಆರೋಪ ಮುಕ್ತವಾಗಿಸಿ ತೀರ್ಪು ಪ್ರಶ್ನಿಸಿ ದೆಹಲಿ ಪೊಲೀಸರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಆರೋಪ ಸಾಬೀತು ಪಡಿಸಲು ತಮ್ಮಲ್ಲಿ ಸಾಕಷ್ಟು ಸಾಕ್ಷ್ಯವಿದೆ ಎಂದು ವಾದಿಸಿ ದೆಹಲಿ ಪೊಲೀಸ್ ಈಗ ಮೇಲ್ಮನವಿ ಸಲ್ಲಿಸಿದೆ.

ಜುಲೈ 25ರಂದು ಶ್ರೀಶಾಂತ್‌ ಮತ್ತು ಇತರರಿಗೆ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ ಆರೋಪ ಮುಕ್ತನೆಂದು ತೀರ್ಪು ನೀಡಿತ್ತು. ಪೊಲೀಸ್ ನೀಡಿದ ಸಾಕ್ಷ್ಯಾಧಾರಗಳು ಆರೋಪ ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎಂದು ಹೇಳಿ ಕೋರ್ಟ್ ತೀರ್ಪು ನೀಡಿತ್ತು.

2013ರ ಐಪಿಎಲ್ 6 ನೇ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಆರೋಪ ಶ್ರೀಶಾಂತ್, ಅಂಕಿತ್ ಚೌಹಾಣ್, ಅಜಿತ್ ಚಾಂಡೀಲಾ ಮೊದಲಾದವರ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ನ್ಯಾಯಾಲಯ ಆರೋಪ ಮುಕ್ತಗೊಳಿಸಿತ್ತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com