ಟೆಸ್ಟ್ ರ್ಯಾಂಕಿಂಗ್: ಅಶ್ವಿನ್ ಪ್ರಗತಿ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಭಾವಿ ಪ್ರದರ್ಶನ ನೀಡಿದ ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ವೇಗಿ ಇಶಾಂತ್ ಶರ್ಮಾ ಅಂತಾರಾಷ್ಟ್ರೀಯ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಪ್ರಗತಿ ಸಾಧಿಸಿದ್ದಾರೆ...
ಆರ್ ಅಶ್ವಿನ್ (ಸಂಗ್ರಹ ಚಿತ್ರ)
ಆರ್ ಅಶ್ವಿನ್ (ಸಂಗ್ರಹ ಚಿತ್ರ)

ದುಬೈ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಭಾವಿ ಪ್ರದರ್ಶನ ನೀಡಿದ ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ವೇಗಿ ಇಶಾಂತ್ ಶರ್ಮಾ ಅಂತಾರಾಷ್ಟ್ರೀಯ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ  ಪ್ರಗತಿ ಸಾಧಿಸಿದ್ದಾರೆ.

ಬೌಲರ್‍ಗಳ ಪಟ್ಟಿಯಲ್ಲಿ 760 ಅಂಕ ಸಂಪಾದಿಸಿರುವ ಆರ್.ಅಶ್ವಿನ್ 8ನೇ ಸ್ಥಾನದಲ್ಲಿದ್ದರೆ, ಇಶಾಂತ್ ಶರ್ಮಾ 613 ಅಂಕಗಳೊಂದಿಗೆ 18ನೇ ಸ್ಥಾನ ಪಡೆದಿದ್ದು, ಅಗ್ರ 20ರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಲಂಕಾ ನೆಲದಲ್ಲಿ 22 ವರ್ಷಗಳ ನಂತರ ಐತಿಹಾಸಿಕ ಸರಣಿ ಜಯಿಸಿದ ವಿರಾಟ್ ಕೊಹ್ಲಿ ಟೆಸ್ಟ್ ಬ್ಯಾಟ್ಸ್‍ಮನ್‍ಗಳ ಪಟ್ಟಿಯಲ್ಲಿ ಕುಸಿತ ಕಂಡಿದ್ದಾರೆ. ಮಂಗಳವಾರ  ಲಂಕಾ ವಿರುದ್ಧದ ಟೆಸ್ಟ್ ಸರಣಿ ಪೂರ್ಣಗೊಂಡ ನಂತರ ಬಿಡುಗಡೆಯಾದ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ 10ರಿಂದ ಹೊರಬಿದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com