

ಶ್ರೀನಗರ: ಜಮ್ಮು ಹಾಗೂ ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ)ಯಲ್ಲಿ ಬಹುಕೋಟಿ ಮೊತ್ತದಲ್ಲಿ ನಡೆದಿರುವ ಅವ್ಯವಹಾರವನ್ನು ಸಿಬಿಐ ತನಿಖೆಗೆ ವಹಿಸುವಂತೆ ಇಲ್ಲಿನ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿತು.
ಮುಖ್ಯ ನ್ಯಾಯಮೂರ್ತಿ ಎನ್. ಪೌಲ್ ವಸಂತ ಕುಮಾರ್ ಹಾಗೂ ನ್ಯಾಯಮೂರ್ತಿ ಬಿ.ಎಲ್. ಭಟ್ ಅವರಿದ್ದ ವಿಭಾಗೀಯ ಪೀಠ, ``ಹಗರಣ ಬಲು ಗಂಭೀರವಾಗಿದ್ದು, ಜೆಕೆಸಿಎ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೇರಿದಂತೆ ಪ್ರಮುಖ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿದ್ದು ಸತ್ಯ ಹೊರಬರಬೇಕಿದೆ'' ಎಂದು ಅಭಿಪ್ರಾಯಪಟ್ಟಿತು. ಸ್ಥಳೀಯ ಕ್ರಿಕೆಟಿಗರಾದ ಅಬ್ದುಲ್ ಮಜೀದ್ ಹಾಗೂ ನಿಸಾರ್ ಅಹಮದ್ ಖಾನ್ ಅರ್ಜಿ ಸಲ್ಲಿಸಿದ್ದರು.