ಕ್ವಾರ್ಟರ್‍ಗೆ ಸೋಮ್ದೇವ್

ಎರಡನೇ ಶ್ರೇಯಾಂಕಿತ ಆಟಗಾರ ಭಾರತದ ಸೋಮ್ದೇವ್ ದೇವ್‍ವರ್ಮನ್ ಎಟಿಪಿ ಬ್ಯಾಂಕಾಕ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಿಂದ ಅಂತಿಮ ಎಂಟರ ಘಟ್ಟ ತಲುಪಿದ್ದಾರೆ...
ಸೋಮ್ ದೇವ್ ವರ್ಮನ್ (ಸಂಗ್ರಹ ಚಿತ್ರ)
ಸೋಮ್ ದೇವ್ ವರ್ಮನ್ (ಸಂಗ್ರಹ ಚಿತ್ರ)
Updated on

ಬ್ಯಾಂಕಾಕ್: ಎರಡನೇ ಶ್ರೇಯಾಂಕಿತ ಆಟಗಾರ ಭಾರತದ ಸೋಮ್ದೇವ್ ದೇವ್‍ವರ್ಮನ್ ಎಟಿಪಿ ಬ್ಯಾಂಕಾಕ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಿಂದ ಅಂತಿಮ  ಎಂಟರ ಘಟ್ಟ ತಲುಪಿದ್ದಾರೆ.

ಆದರೆ ಎನ್. ಶ್ರೀರಾಮ್ ಬಾಲಾಜಿ ಮೂರು ಸೆಟ್‍ಗಳ ಸೆಣಸಾಟದಲ್ಲಿ ಸೋಲಿನೊಂದಿಗೆ ಸಿಂಗಲ್ಸ್‍ನಿಂದ ಹೊರಬಿದ್ದಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅರ್ಹತಾ ಆಟಗಾರ  ಆಂಡ್ರ್ಯೂ ವ್ಹಿಟ್ಟಿಂಗ್‍ಟನ್ ವಿರುದ್ಧದ ಸೆಣಸಾಟದಲ್ಲಿ ಆಸೀಸ್ ಆಟಗಾರ ಬಿಸಿಲ ತಾಪದಿಂದ ಬಳಲಿ ಆಟದ ಮಧ್ಯದಲ್ಲಿಯೇ ಹಿಮ್ಮೆಟಿದರು. ಈ ಸಂದರ್ಭದಲ್ಲಿ ಸೋಮ್ 75, 42ರ ಮುನ್ನಡೆ  ಸಾಧಿಸಿದ್ದರು. ಇನ್ನು ಮತ್ತೊಂದು ಪಂದ್ಯದಲ್ಲಿ ಬಾಲಾಜಿ 76 (4), 26, 36 ಸೆಟ್ ಗಳಿಂದ ಬೆಂಜಮಿನ್ ಮಿಚೆಲ್ ವಿರುದ್ಧ ಸೋತರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com