ಎನ್‍ಎಸ್‍ಸಿಐ ಓಪನ್ ಸ್ಕ್ವಾಷ್ ಫೈನಲ್ ಗೆ ಜೋಷ್ನಾ, ಮಹೇಶ್ ಲಗ್ಗೆ

ಭಾರತದ ಸ್ಕ್ವಾಷ್ ತಾರೆಯರಾದ ಜೋಷ್ನಾ ಚಿನ್ನಪ್ಪ ಹಾಗೂ ಮಹೇಶ್ ಮಂಗಾವ್‍ಕರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸುವರಿಸುವ ಮೂಲಕ ಎನ್‍ಎಸ್‍ಸಿಐ ಓಪನ್...
ಜೋಷ್ನಾ ಚಿನ್ನಪ್ಪ
ಜೋಷ್ನಾ ಚಿನ್ನಪ್ಪ

ಭಾರತದ ಸ್ಕ್ವಾಷ್ ತಾರೆಯರಾದ ಜೋಷ್ನಾ ಚಿನ್ನಪ್ಪ ಹಾಗೂ ಮಹೇಶ್ ಮಂಗಾವ್‍ಕರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸುವರಿಸುವ ಮೂಲಕ ಎನ್‍ಎಸ್‍ಸಿಐ ಓಪನ್ ಸ್ಕ್ವಾಷ್ ಟೂರ್ನಿಯ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ಉಪಾಂತ್ಯದ ಪಂದ್ಯದಲ್ಲಿ ಜೋಷ್ನಾ ತಮ್ಮ ಪ್ರತಿಸ್ಪರ್ಧಿ ಇಂಗ್ಲೆಂಡ್‍ನ ಪಿಮೋನಾ ಮೊವೆರ್ಲೆ ವಿರುದ್ಧ 11--0, 11--4, 11--8 ಗೇಮ್ ಗಳ ಸುಲಭ ಜಯ ಸಂಪಾದಿಸಿದರು.

ಇನ್ನು ಪುರುರ ಸಿಂಗಲ್ಸ್ ವಿಭಾಗದಲ್ಲಿ ಮಹೇಶ್ ತಮ್ಮ ಪ್ರತಿಸ್ಪರ್„ ಈಜಿಪ್ಟ್ ನ ಮೊಜೆಲ್ ಗಮಾಲ್ ವಿರುದ್ಧ 11- -6, 11--1, 11--6 ಗೇಮ್ ಗಳ  ಅಂತರದಲ್ಲಿ ಗೆದ್ದರು. ಅಂತಿಮ ಸುತ್ತಿನಲ್ಲಿ ಜೋಷ್ನಾ ಈಜಿಪ್ಟ್ ನ ಹಬಿಬಾ ಮೊಹಮದ್ ವಿರುದ್ಧ
ಹಾಗೂ ಮಹೇಶ್ ಇಂಗ್ಲೆಂಡ್‍ನ ಅಗ್ರಶ್ರೇಯಾಂಕಿತ ಆ್ಯಡ್ರಿಯಾನ್ ವಾಲರ್ ವಿರುದ್ದ ಕಾದಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com