ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ರಿಂದ ಇದನ್ನು ನಿರೀಕ್ಷಿಸಿರಲಿಲ್ಲ: ಶ್ರೀನಿವಾಸನ್

ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್, ಐಪಿಎಲ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಜತೆ ಸಂಪರ್ಕ ಹೊಂದಿರುವ ವಿಚಾರ ಅಚ್ಚರಿ ತಂದಿದ್ದು...
ಎನ್. ಶ್ರೀನಿವಾಸನ್
ಎನ್. ಶ್ರೀನಿವಾಸನ್
Updated on: 

ಕೋಲ್ಕತಾ: ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್, ಐಪಿಎಲ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಜತೆ ಸಂಪರ್ಕ ಹೊಂದಿರುವ ವಿಚಾರ ಅಚ್ಚರಿ ತಂದಿದ್ದು, ಶಶಾಂಕ್ ಅವರಿಂದ ತಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದ ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

2013ರ ಐಪಿಎಲ್ ಬೆಟ್ಟಿಂಗ್ ಹಗರಣದ ಸಂದರ್ಭದಲ್ಲಿ ಮೋದಿ, ಮನೋಹರ್ ನಡುವೆ ಸಂಪರ್ಕ ಇದ್ದುದಾಗಿ ಪತ್ರಿಕೆಯೊಂದು ಶನಿವಾರ ವರದಿ ಮಾಡಿತ್ತು.

ಲಲಿತ್ ಮೋದಿಯನ್ನು ಬಿಸಿಸಿಐನಿಂದ ಹೊರಹಾಕಿದ್ದಾಗ ಶಶಾಂಕ್ ಅವರೇ ಬಿಸಿಸಿಐ ಅಧ್ಯಕ್ಷರಾಗಿದ್ದರು. ಈಗ ಅವರಿಬ್ಬರೂ ನಂಟು ಹೊಂದಿದ್ದರೆಂಬ ವಿಚಾರ ಅಚ್ಚರಿ ತಂದಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com