

ನವದೆಹಲಿ: ಸೆಪ್ಟೆಂಬರ್ 16ಕ್ಕೆ ಆರಂಭವಾಗಲಿರುವ ಬಾಂಗ್ಲಾದೇಶ ಎ ತಂಡದ ವಿರುದ್ಧ ಏಕದಿನ ಪಂದ್ಯದಲ್ಲಿ ಇಂಡಿಯಾ ಎ ತಂಡದಲ್ಲಿ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಆಡುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ಹೇಳಿವೆ.
ಸೆಪ್ಟೆಂಬರ್ 5ಕ್ಕೆ ಬಿಸಿಸಿಐ ಏಕದಿನ ಪಂದ್ಯದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಭಾರತ ಎ ಮತ್ತು ಬಾಂಗ್ಲಾದೇಶ ಎ ತಂಡದ ನಡುವೆ ಮೂರು ಏಕದಿನ ಮತ್ತು ಮೂರು ದಿನ ದೀರ್ಘದ ಎರಡು ಪಂದ್ಯಗಳು ನಡೆಯಲಿವೆ.
ಎಲ್ಲ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ.
ಏಕದಿನ ಪಂದ್ಯ ಮತ್ತು ಟೆಸ್ಟ್ ಪಂದ್ಯದ ನಾಯಕ ಯಾರು ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
ಅದೇ ವೇಳೆ ಈ ಸರಣಿಯಲ್ಲಿ ಸುರೇಶ್ ರೈನಾ ಮತ್ತು ಅಂಬಟಿ ರಾಯ್ಡು ಕೂಡಾ ಆಡುವ ಸಾಧ್ಯತೆ ಇದೆ.