

ನವದೆಹಲಿ: ಕ್ರಿಕೆಟ್ ದಾಖಲೆಗಳ ವಿಚಾರದಲ್ಲಿ ಭಾರತ ಕ್ರಿಕೆಟ್ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮುಂದೊಂದು ದಿನ ಸಚಿನ್ ತೆಂಡೂಲ್ಕರ್ ರನ್ನು ಹಿಂದಿಕ್ಕುತ್ತಾರೆಂಬ ಮಾತಿದೆ.
ಆದರೆ, ಅದಕ್ಕೂ ಮುನ್ನ ಟ್ವಿಟರ್ ನಲ್ಲಿ ಅವರು ಸಚಿನ್ ರನ್ನು ಹಿಂದಿಕ್ಕಿದ್ದಾರೆ! ಹೌದು. ಇದೀಗ ಟ್ವಿಟರ್‍ನಲ್ಲಿ ಕೊಹ್ಲಿಯವರ ಹಿಂಬಾಲಕರ (ಫಾಲೋವರ್ಸ್) ಸಂಖ್ಯೆ 80 ಲಕ್ಷಕ್ಕೇರಿದೆ! ಈ ವಿಚಾರದಲ್ಲಿ ಅವರು, ಸಚಿನ್ ಮಾತ್ರವಲ್ಲ ಹಾಲಿ ಏಕದಿನ ತಂಡದ ನಾಯಕ ಧೋನಿಯನ್ನೂ ಹಿಂದಿಕ್ಕಿದ್ದಾರೆ.
ಸಚಿನ್ ಹಿಂಬಾಲಕರ ಸಂಖ್ಯೆ 70 ಲಕ್ಷ 73 ಸಾವಿರ ಆಗಿದ್ದರೆ, ಧೋನಿ ಇನ್ನಷ್ಟೇ 50 ಲಕ್ಷ ಫಾಲೋವರ್ ಗಳನ್ನು ಮುಟ್ಟಬೇಕಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.