

ಭಾರತ ಏಕದಿನ ಕ್ರಿಕೆಟ್ ತಂಡದ ಎಂ.ಎಸ್. ಧೋನಿ ಟೀಂ ಇಂಡಿಯಾದ ಕಾಮಿಡಿಯನ್ ಎಂದು ಸುರೇಶ್ ರೈನಾ ಹೇಳಿದ್ದಾರೆ.
'ಮಿಕ್ಕವರ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ನನ್ನ ಮಟ್ಟಿಗೆ ಹೇಳುವುದಾದರೆ, ಧೋನಿ ಭಾರತ ತಂಡದ ಹಾಸ್ಯಗಾರನೇ ಸರಿ.
ಮೈದಾನದಲ್ಲಿ ಅವರು ಎಷ್ಟು ಗಂಭೀರವಾಗುತ್ತಾರೋ, ಅಷ್ಟೇ ಡ್ರೆಸ್ಸಿಂಗ್ ರೂಮ್ ನಲ್ಲಿ ಅಷ್ಟೇ ಹಾಸ್ಯಗಾರರಾಗಿ ಮಿಕ್ಕವರನ್ನು ನಗಿಸುತ್ತಾರೆ. ನಿತ್ಯ ಹಾಸ್ಯರಸಾಯನವನ್ನು ಅವರು ಉಣಬಡಿಸುತ್ತಾರೆ'' ಎಂದು ರೈನಾ ಹೇಳಿದ್ದಾರೆ.