

ನವದೆಹಲಿ: ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನ ಯುಎಇ ಫ್ರಾಂಚೈಸಿಯ ಸಹ ಮಾಲೀಕತ್ವವನ್ನು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಡೆದಿದ್ದಾರೆ.
ಪ್ರಸಕ್ತ ಸಾಲಿನ ಟೂರ್ನಿ ಡಿ.2ರಂದು ಆರಂಭವಾಗಲಿದ್ದು, ಯುಎಇ ರಾಯಲ್ಸ್ ತಂಡದ ಸಲಹೆಗಾರರಾಗಿ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ನಿಯುಕ್ತಿಯಾಗಿದ್ದಾರೆ. ಭಾರತ ಟೆನಿಸ್ನ ಮಾಜಿ ಆಟಗಾರ ಮಹೇಶ್ ಭೂಪತಿ ಐಪಿಟಿಎಲ್ನ ಸಂಸ್ಥಾಪಕರಾಗಿದ್ದು, ಈ ಟೂರ್ನಿ ಐದು ಫ್ರಾಂಚೈಸಿಗಳನ್ನು ಹೊಂದಿದ್ದು, ಐದು ದೇಶಗಳಲ್ಲಿ ನಡೆಯುತ್ತದೆ.
ಟೆನಿಸ್ ಕ್ರೀಡೆಯನ್ನು ನಾನು ಸಾಕಷ್ಟು ಆಸಕ್ತಿಯಿಂದ ವೀಕ್ಷಿಸುತ್ತೇನೆ. ಈಗ ಈ ಕ್ರೀಡೆಯ ಒಂದು ಭಾಗವಾಗುತ್ತಿರುವುದು ಸಂತೋಷ ತಂದಿದೆ. ನಾನು ರೋಜರ್ ಫೆಡರರ್ ಅವರ ಅಭಿಮಾನಿ. ಅವರೊಂದಿಗೆ ಯುಎಇ ರಾಯಲ್ಸ್ ತಂಡ ಸೇರುತ್ತಿರುವುದು ಮತ್ತೊಂದು ವಿಶೇಷ.
-ವಿರಾಟ್ ಕೊಹ್ಲಿ ಕ್ರಿಕೆಟಿಗ, ಯುಎಇ ರಾಯಲ್ಸ್ನ ಸಹ ಮಾಲೀಕ