ನವದೆಹಲಿ: ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯೊಳಗಿನ ಒಳ ರಾಜಕೀಯ, ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿ ರುವ ರಣಜಿ ಟೂರ್ನಿ ಸಂಭಾವ್ಯರ ಅಭ್ಯಾಸ ಶಿಬಿರದ ಮೇಲೂ ಬೀರಿದೆ.
ಹಿರಿಯ ಆಟಗಾರ ಗೌತಮ್ ಗಂಭೀರ್ ಅಭ್ಯಾಸ ನಿರತರಾಗಿದ್ದಾಗ ಡಿಡಿಸಿಎನ ಕೆಲವು ಹಿರಿಯ ಅಧಿಕಾರಿಗಳು ಅವರಿಗೆ ಅಭ್ಯಾಸದಿಂದ ಹೊರಗುಳಿಯುವಂತೆ ಸೂಚಿಸಿದ್ದಾರೆನ್ನಲಾಗಿದೆ.
ಇತ್ತೀಚೆಗೆ ನಡೆದ ಡಿಡಿಸಿಎನ ಕ್ರೀಡಾ ಸಮಿತಿಯ ಪದಾಧಿಕಾರಿಗಳ ಚುನಾವಣೆ ಫಲಿತಾಂಶ ಬರುವವರೆಗೂ ಅಭ್ಯಾಸ ನಡೆಸದಿರಲು ಸೂಚಿಸಲಾಗಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.