ಚಾರಿಟಿ ಪಂದ್ಯದಲ್ಲಿ ಮಿಂಚಿದ ಧೋನಿ

Published On :
ಲಂಡನ್: ಬ್ರಿಟೀಷ್ ಯೋಧರ ನೆರವಿಗಾಗಿ ನಡೆಸಲಾದ ಸೌಹಾರ್ದ ಪಂದ್ಯದಲ್ಲಿ ಹೆಲ್ಪ್ ಫಾರ್ ಹಿರೋಸ್ ತಂಡದ ಪರ ಮಹೇಂದ್ರ ಸಿಂಗ್ ಧೋನಿ ಗಮನಾರ್ಹ ಪ್ರದರ್ಶನ ನೀಡಿದ್ದು, ವಿಶ್ವ ಇತರೆ ಇಲೆವೆನ್ ತಂಡದ ವಿರುದ್ಧ ಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 20 ಸಾವಿರ ಪ್ರೇಕ್ಷಕರು ನೆರೆದಿದ್ದ ಓವಲ್ ಕ್ರೀಡಾಂಗಣದಲ್ಲಿ ವಿಶ್ವ ಇತರೆ ಇಲೆವೆನ್ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 6 ವಿಕೆಟ್ಗೆ 158 ರನ್ ಪೇರಿಸಿತು. ಈ ಮೊತ್ತ ಬೆನ್ನಟ್ಟಿದ ಹೆಲ್ಪ್ ಫಾರ್ ಹಿರೋಸ್ ತಂಡ 19.3 ಓವರ್ಗಳಲ್ಲಿ 6 ವಿಕೆಟ್ಗೆ 159 ರನ್ ದಾಖಲಿಸಿತು. ಧೋನಿ 22 ಎಸೆತಗಳಲ್ಲಿ 38 ರನ್ ದಾಖಲಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೆಲ್ಪ್ ಫಾರ್ ಹಿರೋಸ್
ತಂಡದ ಪರ ಆಡಿದ ವಿರೇಂದ್ರ ಸೆಹ್ವಾಗ್ 25 ಎಸೆತಗಳಲ್ಲಿ 30 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ವಿಶ್ವ ಇತರೆ ಇಲೆವೆನ್ 20 ಓವರ್ಗ ಳಲ್ಲಿ 6 ವಿಕೆಟ್ಗೆ 158 (ಜಯವರ್ದನೆ 48, ಹೇಡನ್ 34, ಅಜರ್ ಮೆಹಮೂದ್ 22ಕ್ಕೆ 2) ಹೆಲ್ಪ್ ಫಾರ್ ಹಿರೋಸ್ 19.3 ಓವರ್ಗಳಲ್ಲಿ 6 ವಿಕೆಟ್ಗೆ 159 (ಧೋನಿ ಅಜೇಯ 38, ಸೆಹ್ವಾಗ್ 30, ಸ್ಟ್ರಾಸ್ 26, ವೆಟೋರಿ 28ಕ್ಕೆ 3)
ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹೇಂದ್ರ ಸಿಂಗ್ ಧೋನಿMS DhoniHeroes XICricket for HeroesRest of the Worldವಿಶ್ವ ಇತರೆ ಇಲೆವೆನ್ಸೌಹಾರ್ದ ಪಂದ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


