ರಿಯೋ ಬಳಿಕ ಫೇಸ್ ನಿವೃತ್ತಿ?

ಭಾರತ ಟೆನಿಸ್ ಲೋಕದ ದಂತಕತೆ ಲಿಯಾಂಡರ್ ಪೇಸ್ ಮುಂದಿನ ವರ್ಷ ಬ್ರೆಜಿಲ್‍ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದೊಂದಿಗೆ,,,,
ಲಿಯಾಂಡರ್ ಫೇಸ್
ಲಿಯಾಂಡರ್ ಫೇಸ್
Updated on: 

ನವದೆಹಲಿ: ಭಾರತ ಟೆನಿಸ್ ಲೋಕದ ದಂತಕತೆ ಲಿಯಾಂಡರ್ ಪೇಸ್ ಮುಂದಿನ ವರ್ಷ ಬ್ರೆಜಿಲ್‍ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದೊಂದಿಗೆ ತಮ್ಮ ವೃತ್ತಿಬದುಕಿಗೆ ವಿದಾಯ ಹೇಳುವ ಸಾಧ್ಯತೆಗಳಿವೆ ಎಂದು ಅವರ ತಂದೆ ವೆಸ್ ಪೇಸ್ ತಿಳಿಸಿದ್ದಾರೆ. 42 ವರ್ಷದ ಪೇಸ್ ಸರಿಸುಮಾರು 2 ದಶಕಗಳಿಗೂ ಹೆಚ್ಚು ಕಾಲ ಅವಿಶ್ರಾಂತವಾಗಿ ಆಡುತ್ತಿದ್ದು ಭಾರತೀಯ ಭಾರತೀಯ ಟೆನಿಸ್‍ಗೆ ತಮ್ಮದೇ ಮಹತ್ತರ ಕಾಣಿಕೆ ನೀಡಿದ್ದಾರೆ.

ರಿಯೋ ಒಲಿಂಪಿಕ್ಸ್ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ, ಇನ್ನಷ್ಟು ಕಾಲ ಆಡಲು ಕಾರಣವೊಂದು ಸಿಗುತ್ತದೆ. ಆದರೆ, ನಿರೀಕ್ಷೆಗೂ ಮೀರಿ ಪೇಸ್ ಆಡಿ ಪದಕವನ್ನೇನಾದರೂ ಗೆದ್ದರೆ ಬಹುಶಃ ಅದು ಆತನ ಕೊನೆಯ ಟೆನಿಸ್ ಆಟವಾಗಲಿದೆ'' ಎಂದು ವೆಸ್ ಪೇಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com